ಪಂಜ: ವಿದ್ಯುತ್ ಬಳಕೆದಾರರ ವೇದಿಕೆ ಅಸ್ತಿತ್ವಕ್ಕೆ ➤ ಸಂಚಾಲಕರಾಗಿ ಶಂಕರ್ ಕುಮಾರ್‌ ಮುಚ್ಚಿಲ ನೇಮಕ

(ನ್ಯೂಸ್ ಕಡಬ) newskadaba.com ಪಂಜ, ನ.24. ಐವತ್ತೊಕ್ಲು, ಕೂತ್ತುಂಜ, ಕೇನ್ಯ, ಬಳ್ಪ, ಪಂಬೆತ್ತಾಡಿ ಮತ್ತು ಕರಿಕ್ಕಳ ವ್ಯಾಪ್ತಿಯ ವಿದ್ಯುತ್ ಬಳಕೆದಾರರ ವೇದಿಕೆಯು ಅಸ್ತಿತ್ವಕ್ಕೆ ಬಂದಿದ್ದು, ಸಂಚಾಲಕರಾಗಿ ಶಂಕರ ಕುಮಾರ್ ಮುಚ್ಚಿಲ ವಕೀಲರು, ಸಹ ಸಂಚಾಲಕರಾಗಿ ಲಿಗೋದರ ಆಚಾರ್ಯ ಹಾಗೂ ಖಜಾಂಜಿಯಾಗಿ ಚಂದ್ರಶೇಖರ ಶಾಸ್ತ್ರೀ ಮತ್ತು ಹದಿನೈದು ಜನ ಸದಸ್ಯರೊಳಗೊಂಡ ಸಮಿತಿಯನ್ನು ರಚಿಸಲಾಯಿತು.

ಪಂಜದ ಸಿ.ಎ. ಬ್ಯಾಂಕ್ ನ ಸಭಾಂಗಣದಲ್ಲಿ ಶನಿವಾರದಂದು ನಡೆದ ಸಭೆಯಲ್ಲಿ ಈ ಕ್ಷೇತ್ರದ ವಿದ್ಯುತ್ ಸಮಸ್ಯೆ ಮತ್ತು ಪಂಜದಲ್ಲಿ 33 ಕೆ ವಿ ವಿದ್ಯುತ್ ಪರಿವರ್ತಕ ಸ್ಥಾಪಿಸಲು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ವಿವಿಧ ಜನಪ್ರತಿನಿಧಿಗಳಿಗೆ ಮನವಿಯ ಮೂಲಕ ಮೆಸ್ಕಾಂ ಗೆ ಮನವಿಯನ್ನು ಸಲ್ಲಿಸುವುದೆಂದು ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಿ.ಎ. ಬ್ಯಾಂಕ್ ನ ಅಧ್ಯಕ್ಷರಾದ ಸಿ. ಚಂದ್ರಶೇಖರ ಶಾಸ್ತ್ರೀ ವಹಿಸಿದ್ದರು. ಶಿವರಾಮಯ್ಯ ಕರ್ಮಜೆ ಪ್ರಾಸ್ತಾವಿಕ ಮಾತನಾಡಿದರು. ಪಂಜ ಗ್ರಾಮ ಪಂಚಾಯತಿ ಅಧ್ಯಕ್ಷ ಕಾರ್ಯಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಿಗೋಧರ ಆಚಾರ್ಯ ವಂದಿಸಿದರು.

Also Read  ➤➤ ವೀಡಿಯೋ ನ್ಯೂಸ್ ➤ ಇಂದಿನ ಪ್ರಮುಖ ಸುದ್ದಿಗಳು (ನವೆಂಬರ್ 26)

error: Content is protected !!
Scroll to Top