✍? MD ಮುಸ್ತಫಾ ಮರ್ಧಾಳ
(ನ್ಯೂಸ್ ಕಡಬ) newskadaba.com ವಿಶೇಷ ಲೇಖನ: ಕೆಲವರಿಗೊಂದು ಭಾವನೆಯಿದೆ.. ವಿಶ್ವವಿದ್ಯಾಲಯ ಗಳೆಂದರೆ ಕೆಲವು ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಯಾಗಿದೆ. ಅಲ್ಲಿರುವ ವಿದ್ಯಾರ್ಥಿಗಳೆಂದರೆ ಅವರು ತರಗತಿಯಲ್ಲಿ ಕುಳಿತು ಪಾಠ ಕೇಳಿ ಅಸೈನ್ಮೆಂಟ್ ಸಬ್ ಮಿಶನ್ (Assignment submission) ಮಾಡಿ ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿ ಸರ್ಟಿಫಿಕೇಟ್ ಗಳಿಸಲು ಮಾತ್ರ ಸೀಮಿತವಾಗಿರಬೇಕು ಎಂದು. JNU ನಂತಹ ವಿಶ್ವ ವಿದ್ಯಾನಿಲಯದ ಮೇಲಿನ ಖರ್ಚನ್ನು ಸರ್ಕಾರದ ಬೊಕ್ಕಸಕ್ಕೆ ನಷ್ಟ ಎಂದು ಬೊಬ್ಬೆ ಹಾಕುವವರ ಬಳಿ ನಮ್ಮ ಪ್ರಶ್ನೆ ಏನೆಂದರೆ, ಇತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡುತ್ತಿರುವಾಗ ನಮ್ಮ ದೇಶದಲ್ಲಿ ಲಕ್ಷಗಟ್ಟಲೆ ಫೀಸು ಪಡೆದು ಶಿಕ್ಷಣ ನೀಡುವುದು ನಮ್ಮ ದೇಶದ ಗೌರವವನ್ನು ಹರಾಜು ಹಾಕುವುದಲ್ಲವೇ ??
ಇತರ ದೇಶಗಳು ಸುಮಾರು 10% ರಷ್ಟು GDP ಅನ್ನು ವಿದ್ಯಾ ಕ್ಷೇತ್ರಕ್ಕೆ ಸುರಿಯುತ್ತಿರುವಾಗ ನಾವು ವಿದ್ಯಾಭ್ಯಾಸಕ್ಕೆ ಹೂಡಿಕೆ ಮಾಡುತ್ತಿರುವುದು GDPಯ ಕೇವಲ 2.8% ಮಾತ್ರ. ಇದು ನಾಚಿಕೆಯ ವಿಷಯವಲ್ಲವೇ ? ಇತ್ತೀಚೆಗಿನ ಸಮೀಕ್ಷೆಗಳ ಪ್ರಕಾರ ಸಂಸತ್ತಿನಲ್ಲಿ ಚರ್ಚೆ ಮಾಡುವುದು (productivity) ಕಡಿಮೆಯಾಗಿದೆ. ಆ ಕಾರಣಕ್ಕೆ ಪಾರ್ಲಿಮಂಟ್ ಅನ್ನೂ ಮುಚ್ಚಬೇಕು ಎನ್ನುವುದು ಸರಿಯೇ..?
ನಮ್ಮ ಮುಂದಿನ ಪೀಳಿಗೆಯನ್ನು ಆಸ್ತಿಯನ್ನಾಗಿಸಬೇಕು ಎಂಬ ಉದ್ದೇಶವಿದ್ದರೆ ನಾವು ವಿದ್ಯಾಭ್ಯಾಸಕ್ಕೆ ಎಷ್ಟೇ ಖರ್ಚಾದರೂ ಅದನ್ನು ನಿಭಾಯಿಸಲೇಬೇಕು. ಸಮಾಜ ವಿಜ್ಞಾನದ ಕ್ಷೇತ್ರದಲ್ಲಿ ಅಂತರ್ರಾಷ್ಟೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ JNU ತರಹದ ವಿಶ್ವವಿದ್ಯಾಲಯಗಳು ದೇಶದ ಆಸ್ತಿ. ಇಲ್ಲಿ ಕಳಿತ ವಿಧ್ಯಾರ್ಥಿಗಳು ರಾಜಕಾರಣ, IAS , IPS ಮುಂತಾದ ವಿವಿಧ ಕ್ಷೇತ್ರದಲ್ಲಿ ದೊಡ್ಡ ಮಟ್ಟಿನಲ್ಲಿ ಹೆಸರು ಮಾಡಿರುವುದನ್ನು ಯಾರಿಂದಲೂ ತಳ್ಳಿ ಹಾಕಲು ಸಾಧ್ಯವಿಲ್ಲ. ಕೋಮುವಾದ, ಬಡತನ, ಭ್ರಷ್ಟಾಚಾರ ಮುಂತಾದವುಗಳು ಸಮಾಜದ ತೊಂದರೆಗಳು ಮತ್ತು ಅಂತಹ ತೊಂದರೆಗಳನ್ನು ಹೋಗಲಾಡಿಸಲು ಸಾಮಾಜಿಕ ವೈದ್ಯರ ಅವಶ್ಯಕತೆ ಇದೆ. ಅಂತಹ ಸಾಮಾಜಿಕ ವೈದ್ಯರನ್ನು ತಯಾರಿಸುವ JNU ನಂತಹಾ ಯುನಿವರ್ಸಿಟಿಗಳನ್ನು ಮುಚ್ಚಿದರೆ ನಮ್ಮ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
JNU ಅಲ್ಲಿ ಒದುತ್ತಿರುವವರು ದೇಶದ್ರೋಹಿಗಳು ಎನ್ನುವವರಿಗೆ ಸಣ್ಣದೊಂದು ಮಾಹಿತಿ. ಪ್ರತೀ ವರ್ಷ JNU ಗೆ ಸುಮಾರು 3ರಿಂದ 5 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಅದರಲ್ಲಿ ಕೇವಲ 3000 ಅಭ್ಯರ್ಥಿಗಳು ಮಾತ್ರ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ JNU ನಲ್ಲಿ ವಿದ್ಯಾಭ್ಯಾಸ ಪಡೆಯಲು ಆಯ್ಕೆಯಾಗುತ್ತಾರೆ. ಈ ರೀತಿ ಆಯ್ಕೆಗೊಂಡ ಬುದ್ದಿವಂತ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳೆನ್ನುವುದು ಎಷ್ಟು ಸರಿ..? ವಿಪರ್ಯಸವೆಂದರೆ JNU ಗೆ ಪರೀಕ್ಷೆ ಬರೆದು ಉತ್ತೀರ್ಣರಾಗಲು ಸಾಧ್ಯವಾಗದ ವಿದ್ಯಾರ್ಥಿಗಳು ಉತ್ತೀರ್ಣಗೊಂಡವರನ್ನು ದೇಶದ್ರೋಹಿಗಳೆನ್ನುತ್ತಿದ್ದು ಇದಕ್ಕೆ ಅವರ ಅಸೂಯೆಯೇ ಕಾರಣವೆಂದು ದೆಹಲಿಯ ಸಾರ್ವಜನಿಕರ ಸಂಶಯವಾಗಿದೆ.
ಕೇವಲ ಘೊಷಣೆ ಕೂಗಿದ ಮಾತ್ರಕ್ಕೆ ಅವರು ದೇಶ ದ್ರೋಹಿಗಳಾಗುವುದಿಲ್ಲ. ಯಾಕೆಂದರೆ ಅನ್ಯಾಯದ ವಿರುದ್ಧ ಘೋಷಣೆ ಕೂಗುವುದು ಪ್ರತಿಯೊಬ್ಬನ ಮೂಲಭೂತ ಹಕ್ಕು. ಹಿಂಸೆಗೆ ಪ್ರೇರೇಪಿಸುವ ಮಾತು ಮಾತ್ರ ಅಪರಾದ ಎಂಬ ವಿಷಯವನ್ನು ಕೊರ್ಟ್ ಹೇಳಿರುವುದನ್ನು ಮರೆತಿದ್ಧೀರಾ??? ಒಂದು ಯುನಿವರ್ಸಿಟಿಯೆಂದರೆ ಅಲ್ಲಿ ವಿಭಿನ್ನ ವಿಚಾರಧಾರೆ ಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವ ಕೇಂದ್ರವಾಗಿರಬೇಕು. ಮತ್ತು ಎಲ್ಲಾ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿರಬೇಕು. ಯಾವ ರೀತಿ ಒಬ್ಬ ಮುಸಲ್ಮಾನನಿಗೆ ಹಿಂದೂ ಧರ್ಮದ ಬಗ್ಗೆ ಗೊತ್ತಾಗಬೇಕಾದರೆ. ಭಗವತ್ ಗೀತೆಯನ್ನು ಓದಬೇಕೋ ಅದೇ ರೀತಿ ಒಬ್ಬ ನಿಜವಾದ ದೇಶ ಭಕ್ತನಿಗೆ ದೇಶದ್ರೋಹದ ಬಗ್ಗೆ ತಿಳಿಯಬೇಕಾದರೆ ವಿಚಾರಧಾರೆಗಳನ್ನು ತಿಳಿಯಬೇಕು.
ಯಾವಾಗ ಒಬ್ಬ ವ್ಯಕ್ತಿಗೆ ಎಲ್ಲಾ ವಿಚಾರಧಾರೆಗಳ ಬಗ್ಗೆ ತಿಳುವಳಿಕೆ ಇರುತ್ತದೂ ಆಗ ಆತನಿಗೆ ದೇಶದ್ರೋಹ, ಕೋಮುವಾದದಂತಹ ದೊಡ್ಡ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಪೊಲೀಸ್ ಹಾಗೂ ಕಾನೂನನ್ನು ಹಣದ ಮುಖಾಂತರ ತನ್ನ ಶಕ್ತಿಯನ್ನಾಗಿ ಭದ್ರಪಡಿಸಲು ಪ್ರಯತ್ನ ಮಾಡಲೂ ಮುಂದಾದರೆ ಆದನ್ನು ತಡೆಯಲು ಸಂವಿಧಾನವು ಪ್ರಜೆಗಳಿಗೆ ನೀಡಿರುವ ಅಸ್ತ್ರವೇ ಪ್ರತಿಭಟನೆ.!! ಮತ್ತು ರಾಜ್ಯಶಾಸ್ತ್ರದ ಪ್ರಕಾರ ಪ್ರತಿಭಟನೆಯನ್ನು ಸರಕಾರದ ದಬ್ಬಾಳಿಕೆಯ ವಿರುದ್ಧ ಬಳಸಿದರೆ ಅದೇ ನಿಜವಾದ ದೇಶ ಪ್ರೇಮ ಮತ್ತು ಪ್ರಜಾಪ್ರಭುತ್ವ ಉಳಿವಿನ ಅಮೃತವಾಗಿದೆ
ಹೊರತು ಪ್ರತಿಭಟನೆವೆಂಬುವುದು ದೇಶದ್ರೋಹವಲ್ಲ.
ಈ ಎಲ್ಲಾ ವಿಚಾರಧಾರೆಯನ್ನು ಕಲಿಸಿ ಕೊಡುವ JNU ನಂತಹ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಮೇಲೆ ಅತೀ ಹೆಚ್ಚು ಶುಲ್ಕವನ್ನು ವಿಧಿಸಿರುವುದು JNU ವಿನಲ್ಲಿ ವಿದ್ಯಾಭ್ಯಾಸ ಪಡೆಯುವ ವಿಧ್ಯಾರ್ಥಿಗಳ ಆಸೆಗೆ ನೀಡುವ ಅತೀ ದೊಡ್ಡ ದ್ರೋಹವಾಗಿದೆ. ಮತ್ತು ಈ ನೀತಿಯ ವಿರುದ್ದ ಹೋರಾಟ ಮಾಡುವ ವಿದ್ಯಾರ್ಥಿಗಳ ಮೇಲೆ ದಬ್ಬಾಲಿಕೆ ಮಾಡುವವರ ವಿರುದ್ಧ ಮಾತನಾಡದೇ ಯುನಿವರ್ಸಿಟಿಯನ್ನು ಮುಚ್ಚಬೇಕು ಎನ್ನುವುದು ಈ ಶತಮಾನದ ಅತೀದೊಡ್ಡ ಮೂರ್ಖತನವಾಗಿದೆ.
✍? MD ಮುಸ್ತಫ ಮರ್ಧಾಳ