ಶೂಟಿಂಗ್ ನಲ್ಲಿ ವಿಶ್ವದಾಖಲೆ ಬರೆದ ಭಾರತದ ಮನು ಬಾಕರ್

(ನ್ಯೂಸ್ ಕಡಬ) newskadaba.com ಚೀನಾ, ನ.21  ವಿಶ್ವಕಪ್ ಶೂಟಿಂಗ್ ಫೈನಲ್ ನಲ್ಲಿ ಭಾರತದ ಶೂಟರ್ ಮನು ಬಾಕರ್ ಚಿನ್ನದ ಪದಕಕ್ಕೆ ಗುರಿಯಿಟ್ಟು ಗುರುವಾರ ನಡೆದ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ.


ಕಿರಿಯರ ವಿಭಾಗದಲ್ಲಿ ಒಟ್ಟು 244.7 ಅಂಕ ಪಡೆದ ಮನು ಬಾಕರ್ ವಿಶ್ವದಾಖಲೆ ಬರೆದರು. ಶೂಟಿಂಗ್ ವಿಶ್ವಕಪ್ ನಲ್ಲಿ ಭಾರತದ ಪಾಲಿಗೆ ಒಲಿದ ಮೊದಲ ಬಂಗಾರದ ಪದಕವಾಗಿದೆ. 17ರ ಹರೆಯದ ಮನು ಬಾಕರ್ ಸಾಧನೆಗೆ ಕ್ರೀಡಾ ವಲಯ ಮೆಚ್ಚುಗೆ ಸೂಚಿಸಿದ್ದು, ಕೇಂದ್ರ ಕ್ರೀಡಾ ಸಚಿವರು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

Also Read  ಡಿ.18ರಂದು ನಗರಪಾಲಿಕೆ ಬಜೆಟ್ ಸಮಾಲೋಚನಾ ಸಭೆ

error: Content is protected !!
Scroll to Top