(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.20. ಖಾಸಗಿ ಸಂಸ್ಥೆಯೊಂದು ಕರ್ನಾಟಕದಲ್ಲಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯ ವರದಿಯನ್ನು ಪ್ರಕಟಿಸಿದ್ದು 2018ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ತಿಳಿಸಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ದ 165 ವಿಧಾನಸಭಾ ಕ್ಷೇತ್ರಗಳ 24,679 ಮತದಾರರನ್ನು ‘ಸಿ ಫೋರ್’ ಸಂಸ್ಥೆಯು 2017ರ ಜುಲೈ 19 ರಿಂದ ಆಗಸ್ಟ್ 10 ರವರೆಗೆ ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ. ರಾಜ್ಯಾದ್ಯಂತ 340 ನಗರ ಹಾಗೂ 550 ಗ್ರಾಮೀಣ ಪ್ರದೇಶಗಳನ್ನು ಹಾಗೂ ವಿವಿಧ ಧರ್ಮ, ಜಾತಿಯ ಜನರನ್ನು ಒಳಗೊಂಡು ಈ ಸಮೀಕ್ಷೆ ನಡೆಸಲಾಗಿದೆ ಎಂದು ಸಿ ಫೋರ್ ತಿಳಿಸಿದೆ. 2008 ಹಾಗೂ 2013ರ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಸಿ ಫೋರ್ ನಡೆಸಿದ ಸಮೀಕ್ಷೆ 99 ಶೇ. ನಿಜವಾಗಿತ್ತು.
ಸಮೀಕ್ಷೆಯ ಮುಖ್ಯಾಂಶಗಳು
ರಾಜ್ಯದಲ್ಲಿ ಕಾಂಗ್ರೆಸ್‌ಗೆ 43 ಶೇ., ಬಿಜೆಪಿಗೆ 32 ಶೇ., ಜೆಡಿಎಸ್‌ಗೆ 17 ಶೇ. ಹಾಗೂ ಇತರರಿಗೆ 8 ಶೇ. ಮತಗಳು ಸಿಗಲಿವೆ. ಕಾಂಗ್ರೆಸ್ 120ರಿಂದ 132ರವರೆಗೆ ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಬಿಜೆಪಿಗೆ ಕೇವಲ 60ರಿಂದ 72 ಸ್ಥಾನಗಳು ಸಿಗಲಿವೆ. ಜೆಡಿಎಸ್ 24ರಿಂದ 30 ಸ್ಥಾನಗಳನ್ನು ಮಾತ್ರ ಪಡೆಯಲಿದೆ. ಇತರರಿಗೆ 1ರಿಂದ 6 ಸ್ಥಾನಗಳು ಬರಲಿವೆ. 46 ಶೇ. ಮತದಾರರ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕು. 27 ಶೇ. ಮತದಾರರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದಿದ್ದರೆ, ಮಾಜಿ ಮಾಖ್ಯಮಂತ್ರಿ ಕುಮಾರಸ್ವಾಮಿ ಪರವಾಗಿ 17 ಶೇ. ಮತದಾರರು ಮಾತ್ರ ಒಳವು ವ್ಯಕ್ತಪಡಿಸಿದ್ದಾರೆ. 44 ಶೇ. ಮತದಾರರ ಪೈಕಿ ಈಗಿನ ಕಾಂಗ್ರೆಸ್ ಸರಕಾರ ಈ ಹಿಂದಿನ ಸರಕಾರಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 18 ಶೇ. ಮತದಾರರು ಈ ಸರಕಾರದ ಬಗ್ಗೆ ಅತ್ಯಂತ ಸಂತೃಪ್ತಿ ವ್ಯಕ್ತಪಡಿಸಿದ್ದರೆ, 53 ಶೇ. ಮತದಾರರು ಈ ಸರಕಾರದ ಬಗ್ಗೆ ಹೆಚ್ಚು ಕಡಿಮೆ ಸಂತೃಪ್ತಿ ಹೊಂದಿದ್ದಾರೆ. 29 ಶೇ.
ಮತದಾರರ ಪೈಕಿ ಈಗಿನ ಕಾಂಗ್ರೆಸ್ ಸರಕಾರ ಈ ಹಿಂದಿನ ಸರಕಾರಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 18 ಶೇ. ಮತದಾರರು ಈ ಸರಕಾರದ ಬಗ್ಗೆ ಅತ್ಯಂತ ಸಂತೃಪ್ತಿ ವ್ಯಕ್ತಪಡಿಸಿದ್ದರೆ, 53 ಶೇ. ಮತದಾರರು ಈ ಸರಕಾರದ ಬಗ್ಗೆ ಹೆಚ್ಚು ಕಡಿಮೆ ಸಂತೃಪ್ತಿ ಹೊಂದಿದ್ದಾರೆ. 29 ಶೇ. ಮತದಾರರಿಗೆ ಈ ಸರಕಾರದ ಕಾರ್ಯವೈಖರಿ ತೃಪ್ತಿ ತಂದಿಲ್ಲ ಎಂದು ಸಮೀಕ್ಷಾ ವರದಿ ತಿಳಿಸಿದೆ.