ಟಿ ಟ್ವೆಂಟಿ ಪಂದ್ಯದಲ್ಲಿ ಮಿಂಚಿದ ಭಾರತದ ವನಿತೆಯರು

 (ನ್ಯೂಸ್ ಕಡಬ) newskadaba.com ಗಯಾನ, ನ.21  ಭಾರತದ ವನಿತೆಯರು ಅಂತಿಮ ಟಿ ಟ್ವೆಂಟಿ ಪಂದ್ಯವನ್ನೂ ವೆಸ್ಟ್ ಇಂಡೀಸ್ ವಿರುದ್ದ ಅಧಿಕಾರಯುತವಾಗಿ 5-0 ಅಂತರದಲ್ಲಿ ಗೆದ್ದಿದ್ದಾರೆ.


ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೂರು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. ಆರಂಭಿಕರಾದ ಶಿಫಾಲಿ ಮತ್ತು ಸ್ಮೃತಿ ಬೇಗನೇ ವಿಕೆಟ್ ಕಳೆದುಕೊಂಡರೂ ನಂತರ ಒಟ್ಟಾದ ವೇದಾ ಕೃಷ್ಣಮೂರ್ತಿ ಮತ್ತು ಜೆಮಿಮಾ ರೋಡ್ರಿಗಸ್ ತಂಡವನ್ನು ಮೇಲಕ್ಕೆತ್ತಿದ್ದಾರೆ. ಈ ಜೋಡಿ 117 ರನ್ ಜೊತೆಯಾಟ ನಡೆಸಿದರು. ಜೆಮಿಮಾ 50 ರನ್ ಬಾರಿಸಿದರೆ, ಕನ್ನಡತಿ ವೇದಾ ಅಜೇಯ 56 ರನ್ ಬಾರಿಸಿದರು. ಗುರಿ ಬೆನ್ನತ್ತಿದ ವಿಂಡೀಸ್ ವನಿತೆಯರು ನಿಗದಿತ 20 ಓವರ್ ಗಳಲ್ಲಿ 73ರನ್ ಅಷ್ಷೇ ಗಳಿಸಿದರು. ಕೈಶೋನಾ ನೈಟ್ 22 ರನ್ ಗಳಿಸಿದ್ದೆ ಅತೀ ಹೆಚ್ಚಿನ ರನ್. ಇದರೊಂದಿಗೆ ವಿಂಡೀಸ್ 61 ಅಂತರದ ಸೋಲನುಭವಿಸಿತು.

Also Read  ಶ್ರೀಲಂಕಾ ವಿರುದ್ದ ಟಿ-20 ಸರಣಿಗೆ ನಾಯಕನಾಗಿ ಹಾರ್ದಿಕ್ ಪಾಂಡ್ಯ.!

error: Content is protected !!
Scroll to Top