ಕಡಬ: ರೈಲಿನಲ್ಲಿ ಮಹಿಳೆಯ ಸರಕಳ್ಳತನಕ್ಕೆ ಯತ್ನ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ನ.19. ರೈಲಿನಲ್ಲಿ ತೆರಳುತ್ತಿದ್ದ ಮಹಿಳೆಯೋರ್ವರ ಕುತ್ತಿಗೆಗೆ ಕೈ ಹಾಕಿ ಚೈನ್ ಎಳೆಯಲು ಯತ್ನಿಸಿದ ಘಟನೆ ಮಂಗಳೂರು – ಸುಬ್ರಹ್ಮಣ್ಯ ರೋಡ್ ರೈಲಿನಲ್ಲಿ ಮಂಗಳವಾರದಂದು ನಡೆದಿದೆ.

ಪುತ್ತೂರಿನಿಂದ ಎಡಮಂಗಲಕ್ಕೆ ತೆರಳುತ್ತಿದ್ದ ಮಹಿಳೆಯೋರ್ವರಿದ್ದ ಬೋಗಿಗೆ ಹತ್ತಿದ ಕಡಬ ತಾಲೂಕು ಕೊಂಬಾರು ಗ್ರಾಮದ ಬೊಟ್ಟಡ್ಕ ನಿವಾಸಿ ಸತೀಶ್ ಎಂಬಾತ ಮಹಿಳೆಯ ಕುತ್ತಿಗೆಗೆ ಕೈಹಾಕಿ ಚೈನ್ ಎಳೆಯಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಬೊಬ್ಬೆ ಹೊಡೆದಿದ್ದರಿಂದ ಬೋಗಿಯಲ್ಲಿದ್ದ ಇತರರು ಆರೋಪಿಯನ್ನು ಹಿಡಿದು ಕಡಬ ಪೊಲೀಸರ ಮೂಲಕ ರೈಲ್ವೇ ಪೊಲೀಸರಿಗೆ ಒಪ್ಪಿಸಿದ್ದಾರೆ.

Also Read  ಕಡಬ: ಸರಸ್ವತೀ ವಿದ್ಯಾಲಯದ ಶಿಶುಮಂದಿರದ ತಡೆಗೋಡೆ ಕುಸಿತ..!!

error: Content is protected !!
Scroll to Top