(ನ್ಯೂಸ್ ಕಡಬ) newskadaba.com ಪುತ್ತೂರು, ಆ.20. ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿದು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಪುತ್ತೂರು ನಗರ ಠಾಣಾ ಪೊಲೀಸರು ಈ ಸಂಬಂಧ ಇಬ್ಬರನ್ನು ಬಂಧಿಸಿರುವ ಘಟನೆ ಶನಿವಾರದಂದು ನಡೆದಿದೆ.
ಕೊಡಿಪ್ಪಾಡಿ ಜನಾರ್ಧನ ದೇವಾಲಯದ ದ್ವಾರದ ಬಳಿ
ಆರೋಪಿಗಳು ಪೊಲೀಸರನ್ನು ಕಂಡು ಓಡಲು ಯತ್ನಿಸಿದಾಗ ಬೆನ್ನಟ್ಟಿದ ಪೊಲೀಸರು ಇಬ್ಬರನ್ನು ಹಿಡಿದು ಪರಿಶೀಲಿಸಲಾಗಿ 39 kg ಹಸಿ ತೊಗಟೆ ಇರುವ ಶ್ರೀಗಂಧದ ತುಂಡುಗಳು, ಗರಗಸ, ಮಂಡೆಕತ್ತಿ ಸಹಿತ ವಶಕ್ಕೆ ತೆಗೆದುಕೊಂಡರು. ಆರೋಪಿಗಳಾದ ರಾಮಕುಂಜ ಗ್ರಾಮದ ಶಿವಪ್ಪ ಮೂಲ್ಯ ಎಂಬವರ ಪುತ್ರ ಪೂವಪ್ಪ ಮತ್ತು ಆರ್ಯಾಪು ಗ್ರಾಮದ ಬಾಳಪ್ಪ ಎಂಬವರ ಪುತ್ರ ಕೇಶವ ಎಂಬವರು ಕೊಡಿಪ್ಪಾಡಿ ಗುಡ್ಡೆಯಿಂದ ಶ್ರೀಗಂಧದ ಮರವನ್ನು ಕಡಿದು ತುಂಡು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಕಳವು ಮಾಡಿರುವುದಾಗಿ ತಿಳಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪುತ್ತೂರು ನಗರ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಮಾರ್ಗದರ್ಶನದಲ್ಲಿ ನಗರ ಠಾಣಾ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ವಿಭಾಗದ ಪಿಎಸ್ಐ ಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.