ಕಡಬ: ಅಡಿಕೆ ಗೋದಾಮಿಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮ ➤ ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಕಡಬ, ನ.15. ಅಡಿಕೆ ಹಾಗೂ ತೆಂಗಿನಕಾಯಿ ಇರಿಸಿದ್ದ ಗೋದಾಮಿಗೆ ಬೆಂಕಿ ತಗುಲಿದ ಪರಿಣಾಮ ಗೋದಾಮು ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಗುರುವಾರ ತಡರಾತ್ರಿ ಕಡಬದಲ್ಲಿ ನಡೆದಿದೆ.

ಕಡಬ ತಾಲೂಕಿನ ಬಂಟ್ರ ಗ್ರಾಮದ ಪಿಲಿಮಜಲು ರಾಧಾಕೃಷ್ಣ ಭಟ್ ಎಂಬವರ ಮನೆಯ ಪಕ್ಕದಲ್ಲೇ ಇದ್ದ ಗೋದಾಮು ತಡರಾತ್ರಿ ವೇಳೆ ಬೆಂಕಿ ತಗುಲಿ ಉರಿಯುತ್ತಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ಪರಿಸರದ ಯುವಕರು ತಕ್ಷಣವೇ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡರಾದರೂ, ಶುಕ್ರವಾರ ಬೆಳಗ್ಗಿನ ವೇಳೆಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಅಪಾರ ಅಡಿಕೆ ಹಾಗೂ ತೆಂಗಿನಕಾಯಿ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.

Also Read  ಜಿಲ್ಲೆಯಲ್ಲಿ ಸಲ್ಲಿಕೆಯಾದ ಒಟ್ಟು 98 ನಾಮಪತ್ರಗಳ ಪೈಕಿ 66 ಕ್ರಮಬದ್ಧ ► ಯಾವೆಲ್ಲಾ ನಾಮಪತ್ರಗಳು ಕ್ರಮಬದ್ಧ ಎಂದು ತಿಳಿಯಬೇಕೇ...?

ಬೆಂಕಿ ನಂದಿಸುವ ಕಾರ್ಯದಲ್ಲಿ ಹೈದರ್ ಸಿ.ಎಂ., ಆದಮ್ ಪಿಲಿಮಜಲು, ಮಹಮ್ಮದ್ ಮರುವಂತಿಲ, ಅಶ್ರಫ್ ಪರುವಂತಿಲ, ಸಿಯಾಬ್ ಮರುವಂತಿಲ, ಷರೀಫ್, ಯಾಕೂಬ್, ಖಾದರ್, ಇರ್ಷಾದ್, ಸಿರಾಜ್ ಹಾಗೂ ರವೀಂದ್ರ ರೈ ಕೈಜೋಡಿಸಿದ್ದಾರೆ.

error: Content is protected !!
Scroll to Top