ಶಕ್ತಿ ಪಿ.ಯು ಕಾಲೇಜಿನಲ್ಲಿ ಕನಕದಾಸ ಜಯಂತಿ

 (ನ್ಯೂಸ್ ಕಡಬ) newskadaba.com ಮಂಗಳೂರು, ನ.15  ಶಕ್ತಿನಗರದ ಶಕ್ತಿ ಪಿ.ಯುಕಾಲೇಜು ಹಾಗೂ ಶಕ್ತಿ ವಸತಿ ಶಾಲೆಯಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಕುದ್ರೋಳಿ ಶ್ರೀ ನಾರಾಯಣಗುರು ಪದವಿ ಪೂರ್ವಕಾಲೇಜಿನ ಕನ್ನಡ ಪ್ರಾಧ್ಯಾಪಕ ಶ್ರೀ ಕೇಶವ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕನಕದಾಸರ ಕೀರ್ತನೆಗಳು ಮತ್ತು ಇತರ ಸಾಹಿತ್ಯ ರಚನೆಗಳು ಲೋಕದ ಡೊಂಕನ್ನು ತಿದ್ದಲು ಪೂರ್ಣ ಸಹಕಾರಿಯಾಗಿದ್ದವು. ಶತಮಾನಗಳ ಹಿಂದೆಯೇ ಕನಕದಾಸರು ಮಾನವ ತನ್ನ ಸಂಕುಚಿತ ಮನೋಭಾವಗಳನ್ನು ಕಿತ್ತೆಸೆದು ಮಾನವ ಜಾತಿ ಒಂದೇ ಎಂಬ ಖಚಿತ ನಿಲುವನ್ನು ತಳೆದು ಮಾನವರೆಲ್ಲರೂ ಒಂದೇ ಎಂಬ ಮನೋಭಾವದಿಂದ ಬದುಕಬೇಕು ಎಂದು ಕರೆಯಿತ್ತರು. ಪಾಖಂಡಿತನ, ತೋರ್ಪಡಿಕೆಯ ಭಕ್ತಿ ಹಾಗೂ ಜನಸೇವೆಯನ್ನು ಅವರು ಖಂಡಿಸಿದರು. ಮನುಜಕುಲವನ್ನು ಸನ್ಮಾರ್ಗದತ್ತ ಕೊಂಡೊಯ್ಯುವಲ್ಲಿ ಕನಕದಾಸರ ಕೀರ್ತನೆಗಳ ಪಾತ್ರ ಹಿರಿದಾದುದು. ಮಾನವಕುಲಕ್ಕೆ ಅವರು ನೀಡಿದ ಸಂದೇಶ ಸಾರ್ವಕಾಲಿಕವಾಗಿ ಶ್ರೇಷ್ಠ ಎಂಬುದರಲ್ಲಿ ಎರಡು ಮಾತಿಲ್ಲ, “ತಲ್ಲಣಿಸದಿರುಕಂಡ್ಯ ತಾಳು ಮನವೇ” ಎಂಬ ಮಾತು ಅವರು ಜಗತ್ತಿಗೆ ನೀಡಿದ ಮಹಾಸಂದೇಶ ಎಂದು ಅವರು ಹೇಳಿದರು.

Also Read  ವಿಟ್ಲ: ಆಸ್ತಿಗಾಗಿ ತಾಯಿಗೆ ಹಲ್ಲೆ ನಡೆಸಿ ಪರಾರಿಯಾದ ಮಗ ➤ ದೂರು ದಾಖಲು


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೆ.ಸಿ ನಾೈಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತಾಧಿಕಾರಿ ಶ್ರೀ ಬೈಕಾಡಿ ಜನಾರ್ದನ ಆಚಾರ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಶ್ರೀ ಪ್ರಖ್ಯಾತ್‍ ರೈ, ಪ್ರಧಾನ ಸಲಹೆಗಾರ ಶ್ರೀ ರಮೇಶ್ ಕೆ, ಎಬಿವಿಪಿ ವಿಭಾಗದ ಸಂಘಟನಾ ಕಾರ್ಯದರ್ಶಿ ಬಸವೇಶ, ಶಕ್ತಿ ವಸತಿ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ವಿದ್ಯಾಕಾಮತ್ ಜಿ, ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಶ್ರೀ ಪ್ರಭಾಕರ ಜಿ.ಎಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Also Read  ಉಡುಪಿ: ಮೀನುಗಾರಿಕಾ ಬಂದರಿನಲ್ಲಿ ಬೋಟ್ ಮಾಲೀಕನ ಮೃತದೇಹ ಪತ್ತೆ

error: Content is protected !!
Scroll to Top