ಎತ್ತು ಮತ್ತು ದನ ಕಳವು

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.15  ದನ ಮತ್ತು ಎತ್ತುವಿಗೆ ಕಾಲು ಬಾಯಿ ಜ್ವರ ಬಂದುದರಿಂದ ತಮ್ಮ ಮನೆಯ ಸಮೀಪದಲ್ಲಿನ ಗದ್ದೆಯಲ್ಲಿ ಕಟ್ಟಿ ಹಾಕಿದ್ದ ದನ ಮತ್ತು ಎತ್ತುವಿನ ಕಳವಾದ ಘಟನೆ ಬಂಟ್ವಾಳದ ಸಜಿಪ ಮೂಡ ಗ್ರಾಮದಲ್ಲಿ ನಡೆದಿದೆ.

ದಿನಾಂಕ 13-11-2019 ರಂದು ರಾತ್ರಿ 8.00 ಗಂಟೆಯಿಂದ ದಿನಾಂಕ 14-11-2019 ರಂದು ಬೆಳಗ್ಗೆ 7.00ಗಂಟೆಯ ಮದ್ಯೆದಲ್ಲಿ ಹಗ್ಗ ಸಮೇತ ದನ ಮತ್ತು ಎತ್ತಿನ ಕಳವಾಗಿದೆ ಹಾಗೂ ಕಳವಾದ ಒಂದು ದನ ಮತ್ತು ಒಂದು ಎತ್ತಿನ ಅಂದಾಜು ಮೌಲ್ಯವು ರೂ 15,000/- ಆಗಬಹುದಾಗಿದೆ ಎಂದು ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Scroll to Top