ನಡುಮಜಲು ಮಹಾವಿಷ್ಣು ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ► ಹೊಸಮ್ಮ ದೇವಿಯ ಸನ್ನಿಧಾನದಲ್ಲಿ ಅಗೇಲು ಸೇವೆ

(ನ್ಯೂಸ್ ಕಡಬ) newskadaba.com ಕಡಬ, ಆ.20. ಹಲವು ಕಾರಣಿಕಗಳಿಗೆ ಪ್ರಸಿದ್ಧವಾದ ಇತಿಹಾಸ ಪ್ರಸಿದ್ಧ 102ನೇ ನೆಕ್ಕಿಲಾಡಿ ಗ್ರಾಮದ ನಡುಮಜಲು ಮಹಾವಿಷ್ಣು ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ಮತ್ತು ಹೊಸಮ್ಮ ದೇವಿಯ ಸನ್ನಿಧಿಯಲ್ಲಿ ಸಂಕ್ರಮಣದ ಅಗೇಲು ಸೇವೆಯು ಆ.16ರಂದು ನಡೆಯಿತು.

ದೇವಳದ ಪ್ರಧಾನ ಆರ್ಚಕರಾದ ಗೋಪಾಲಕೃಷ್ಣ ಕೆದಿಲಾಯ ದೀಪ ಬೆಳಗಿಸಿ ಭಜನಾ ಕಾರ್ಯಕ್ರಮ ಆರಂಭಿಸಿದರು. ಬಳಿಕ ಹೊಸಮ್ಮ ದೇವಿಯ ಸನ್ನಿಧಿಯಲ್ಲಿ ಸಂಕ್ರಮಣದ ಅಗೇಲು ಸೇವೆ ನಡೆಯಿತು. ಅಗೇಲು ಸೇವೆಯನ್ನು ದೈವದ ಪರಿಚಾರಕ ವಿಶ್ವನಾಥ ರೈ ಕರ್ಬಿಂತ್ತೀಲ್ ನಡೆಸಿಕೊಟ್ಟರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಪ್ರೌಢ ಶಾಲಾ ಮುಖ್ಯಗುರು ಯಶವಂತ ರೈ ಮರ್ದಾಳ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಸೂರ್ಯ ರೈ ಮಾದೋಡಿ, ಉಪಾಧ್ಯಕ್ಷರಾದ ಅಶೋಕ್ ರೈ ವಜ್ರಪಾಣಿ, ಮೊಕ್ತೇಸರ ಚಂದ್ರಶೇಖರ ರೈ, ದೇವಳದ ಆಡಳಿತ ಸಮಿತಿ ಅಧ್ಯಕ್ಷ ಶ್ಯಾಮಸುಂದರ ರೈ, ಉಪಾಧ್ಯಕ್ಷೆ ಕಲ್ಯಾಣಿ ಬಾಬು ಹೆಗ್ಡೆ, ಜತೆ ಕಾರ್ಯದರ್ಶಿ ಅಶೋಕ್ ಕುಮಾರ್ ರೈ, ಕೋಶಾಧಿಕಾರಿ ರತ್ನಕುಮಾರ್ ಹೆಗ್ಡೆ, ಗ್ರಾ.ಪಂ.ಸದಸ್ಯ ದಾಮೋದರ ಡೆಪ್ಪುಣಿ, ಪ್ರಮುಖರಾದ ಮೀನಾಕ್ಷಿ ಪುರುಷೋತ್ತಮ, ಕೂಸಪ್ಪ ಗೌಡ ಕೋಲಂತ್ತಾಡಿ, ಪ್ರೇಮಸಾಗರ ಆಳ್ವ ಅತ್ಲಾಜೆ, ಬೇಬಿ ರೈ ಮಾಲೇಶ್ವರ, ತಿಮ್ಮಪ್ಪ ಕೋಲಂತ್ತಾಡಿ, ಶಶಿಕಿರಣ್ ರೈ ಬಡಕೋಡಿ, ಪ್ರಮೋದ್ ರೈ ಕುಡಾಲ, ಸಂತೋಷ್ ಪಾಲೆತ್ತಡ್ಕ, ಪ್ರಮೋದ್ ನಂದುಗುರಿ, ಸುರೇಶ್ ರೈ ಅಳೇರಿ, ಶಿವರಂಜನ್ ರೈ ಮಿತ್ತೋಡಿ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು. ದೂರದೂರುಗಳಿಂದ ಅನೇಕ ಭಕ್ತರು ಆಗಮಿಸಿ ಹೊಸಮ್ಮ ದೇವಿಯ ಸನ್ನಿಧಾನದಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

error: Content is protected !!
Scroll to Top