ಬಡವರ ಮೇಲಿನ ಮೈಕ್ರೋ ಫೈನಾನ್ಸ್ ಗಳ ದೌರ್ಜನ್ಯಕ್ಕೆ ಕೊನೆ ಇಲ್ಲವೇ?

ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಕಡಿಮೆ ಬಡ್ಡಿ ದರದಲ್ಲಿ ಜನಸಾಮನ್ಯರಿಗೆ ಸಾಲವನ್ನು ನೀಡದೆ, ಅದೇ ಸಾಲವನ್ನು 11% ಬಡ್ಡಿ ದರಕ್ಕೆ ಮೈಕ್ರೋ ಫೈನಾನ್ಸ್ ಗಳಿಗೆ ನೀಡಿ ಜನಸಾಮಾನ್ಯರಿಗೆ ವಂಚನೆಯನ್ನು ಮಾಡುತ್ತಿದೆ. 11% ಶೇಕಡ ಬಡ್ಡಿ ದರಕ್ಕೆ ಸಾಲವನ್ನು ಪಡೆದ ಮೈಕ್ರೋ ಫೈನಾನ್ಸ್ ಗಳು ಅದೇ ಸಾಲವನ್ನು ಶೇ 21% ಬಡ್ಡಿದರದಂತೆ ಬಡವರಿಗೆ ನೀಡಿ ಮಧ್ಯವರ್ತಿ ಕೆಲಸ ಮಾಡಿ ಬಡವರಿಂದ ಹಗಲು ದರೋಡೆ ಮಾಡುತ್ತಿದೆ.

(ಉದಾಹರಣೆಗೆ;- ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ₹5,00,000 ಹಣವನ್ನು (5ಲಕ್ಷ) ಮೈಕ್ರೋ ಫೈನಾನ್ಸ್ ಗಳು ₹55000ರೂ ಬಡ್ಡಿ ದರಕ್ಕೆ ಪಡೆದು.
ಅದೇ ₹5,00,000 ಹಣವನ್ನು (5ಲಕ್ಷ) ₹105000 ರಿಂದ ₹205000ರೂ ನೀಡಿ ಮಧ್ಯವರ್ತಿ ಕೆಲಸವನ್ನು ಮಾಡುತ್ತಿದೆ. ಅಂದರೆ ₹5,00,000 ಸಾಲವನ್ನು ಹಿಂತಿರುಗಿಸುವಾಗ ₹6,05,000 ರಿಂದ 7,05,000 ಹೆಚ್ಚುವರಿ ಮೊತ್ತವನ್ನು *(₹2,05,000)* ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.)

ಮೈಕ್ರೋ ಫೈನಾನ್ಸ್ ಗಳ ನಿಯಮದ ಪ್ರಕಾರ ಸಾಲಪಡೆದಂತಹ ಮಹಿಳೆಯರು ವಾರಕ್ಕೊಮ್ಮೆ ನಿಗದಿ ಪಡಿಸಿದಂತಹ ಹಣವನ್ನು ನೀಡಲೇಬೇಕು ಯಾವುದೇ ಕಾರಣಕ್ಕೆ ತಪ್ಪಿಸುವಂತಿಲ್ಲ ಒಂದು ವೇಳೆ ಮನೆಯಲ್ಲಿ ಸಾವು ಸಂಭವಿಸಿದರೂ, ಕಾರ್ಯಕ್ರಮ ಇದ್ದರೂ, ಹಣ ಇಲ್ಲದಿದ್ದರೂ ಇನ್ನಿತರ ಯಾವುದೇ ಕಾರ್ಯಕ್ರಮ ಇದ್ದರೂ ಮೈಕ್ರೋ ಫೈನಾನ್ ಗಳಿಗೆ ವಾರದ ಹಣವನ್ನು ಹೇಗಾದರು ನೀಡಲೇಬೇಕು ಇಲ್ಲದಿದ್ದರೆ ಮೈಕ್ರೋ ಫೈನಾನ್ಸ್ ಏಜೆಂಟ್ ಹಣ ನೀಡದಂತಹ ಮನೆಯಿಂದ ರಾತ್ರಿಯಾದರೂ ತೆರಳುವುದಿಲ್ಲ.

ಸರಕಾರಿ ಸ್ವಾಮ್ಯದ ಬ್ಯಾಂಕುಗಳು ನೇರವಾಗಿ ಜನಸಾಮಾನ್ಯರಿಗೆ ಸಾಲ ನೀಡುವುದನ್ನು ಬಿಟ್ಟು, ಮೈಕ್ರೋ ಫೈನಾನ್ಸ್ ಮುಖಾಂತರ ಸಾಲವನ್ನು ನೀಡಿ ಅತ್ತ ತಾವು ಪಡೆದಂತಹ ಸಾಲಗಳಿಗೆ ಬಡ್ಡಿಯನ್ನು ತೀರಿಸಲಾಗದೆ ಇತ್ತ ದೈನಂದಿನ ಜೀವನವನ್ನು ನಡೆಸಲೂ ಸಾಧ್ಯವಾಗದೆ ಜನಸಾಮನ್ಯರು ಶೊಚನೀಯ ಸ್ಥಿತಿಗೆ ತಲುಪುತ್ತಿದ್ದಾರೆ.

ಅನ್ಯಾಯಕ್ಕೆ ಒಳಗದಾಂತಹ ಬಡವರು, ನಿರ್ಗತಿಕರು, ಬೀಡಿಕಾರ್ಮಿಕರು ತಮ್ಮ ತಾಳ್ಮೆಯ ಮಿತಿಯನ್ನು ಮೀರಿ
ಇಂದು ಮೈಕ್ರೋ ಫೈನಾನ್ಸ್ ಗಳ ವಿರುದ್ದ ಧ್ವನಿ ಎತ್ತುತ್ತಿದ್ದಾರೆ. ತಾವು ಪಡೆದಂತಹ ಸಾಲಗಳಿಗೆ ಬಡ್ಡಿಯನ್ನು ತೀರಿಸಲಾಗದೆ *ರಾಜ್ಯದಿಂದ ಮೈಕ್ರೋ ಫೈನಾನ್ಸ್ ನ್ನು ಓಡಿಸಿಯೇ ಸಿದ್ದ* ಎಂಬ ಘೋಷವಾಕ್ಯದೊಂದಿಗೆ ಕರವಾಳಿಯದ್ಯಾಂತ ಸಾಲಮುಕ್ತಕ್ಕಾಗಿ ವಿವಿಧ ಸಂಘಸಂಸ್ಥೆಯ ಮೂಲಕ ಜನಸಾಮನ್ಯರು ಮೈಕ್ರೋ ಫೈನಾನ್ಸ್ ಗಳ ವಿರುದ್ದ ಹೋರಾಟವನ್ನು ಮಾಡುತ್ತಿದ್ದಾರೆ.

ಆದರೆ ಇದ್ದನ್ನೆಲ್ಲಾ ಕಂಡು ಕಾಣದಂತೆ ಇರುವಂತ ಸರ್ಕಾರ ಜನಸಾಮನ್ಯರ ಕೆಂಗಣ್ಣಿಗೆ ಗುರಿಯಾಗಿದೆ.

ಬಡವರ ಮೇಲಿನ ಮೈಕ್ರೋ ಫೈನಾನ್ಸ್ ಗಳ ದೌರ್ಜನ್ಯಕ್ಕೆ ಕೊನೆ ಇಲ್ಲವೇ?. ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಸರ್ಕಾರಕ್ಕೆ ಮೈಕ್ರೋ ಪೈನಾನ್ಸ್ ಗಳ ಅನ್ಯಾಯಕ್ಕೆ ಒಳಗಾದ ಜನಸಾಮನ್ಯರ ಬೇಡಿಕೆಗಳು:-

1. ಸಣ್ಣ ಹಣಕಾಸು ವ್ಯವಹಾರ ನಡೆಸಲು ಅನುಮತಿ ಪಡೆದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅತಿದೊಡ್ಡ ಹಣಕಾಸು ವ್ಯವಹಾರ ನಡೆಸುತ್ತಾ ಭಾರತದ ಆರ್ಥಿಕತೆ ಕುಸಿತಕ್ಕೂ ಕಾರಣವಾಗಿದೆ. ರಾಷ್ಟೀಯ ಬ್ಯಾಂಕ್ ಗಳಿಂದಲೂ 11% ಬಡ್ಡಿಗೆ ಸಾಲ ಪಡೆಯುವ ಫೈನಾನ್ಸ್ ಗಳು ಸರಕಾರದ ಲೆಕ್ಕಕ್ಕೆ ತೋರಿಸದೆ ಕೋಟ್ಯಾಂತರ ಹಣವನ್ನು ಸೇರಿಸಿ ಬಡವರಿಗೆ ದುಬಾರಿ ಬಡ್ಡಿ ದರವನ್ನು ಕಾನೂನು ಬಾಹಿರವಾಗಿ ಸಾಲ ನೀಡುತ್ತಿದೆ.

2. ಕಾನೂನು ಬಾಹಿರವಾಗಿ ನಡೆದ ಈ ಸಾಲ ವ್ಯವಹಾರಗಳನ್ನು ಕಾನೂನು ಉಲ್ಲಂಘನೆಯ ಸಾಲಗಳೆಂದು ಪರಿಗಣಿಸಿ ಮನ್ನಾ ಮಾಡಬೇಕು.

3.ಅರ್.ಬಿ.ಐ ಹಾಗೂ ಸಹಕಾರಿ ಕಾಯಿದೆಯ ಪರವಾನಿಗೆ ಪಡೆದ ಈ ಫೈನಾನ್ಸ್ ಕಾನೂನು ಪಾಲನೆ ಮಾಡದಿರುವುದರಿಂದ ಸಾಲಗಳು ಕಾನೂನಿನ ಚೌಕಟ್ಟಿನಲ್ಲಿ ಇಲ್ಲ ಎಂದು ಪರಿಗಣಿಸಬೇಕು.

3.ಫೈನಾನ್ಸ್ ಗಳ ಬಲತ್ಕಾರದ ಸಾಲ ವಸೂಲಿ, ಬೆದರಿಕೆ ತಡೆಯಬೇಕು.

4.ಋಣಮುಕ್ತ ಕಾಯಿದೆಯ ವ್ಯಾಪ್ತಿಗೆ ಪ್ರವಾಹ ಸಂತ್ರಸ್ಥರು, ಬೀಡಿ ಕಾರ್ಮಿಕರನ್ನು ಸೇರಿಸಬೇಕು.

5.ಲಕ್ಷಾಂತರ ಕೋಟಿ ರೂ. ಹಣದ ವ್ಯವಹಾರ ನಡೆಸುವ ಫೈನಾನ್ಸ್ ಗಳ ಹಣದ ಮೂಲ ತನಿಖೆಯಾಗಬೇಕು.

ಲೇಖನ : ಅಬ್ದುಲ್ ರಝಾಕ್ ಮರ್ಧಾಳ

error: Content is protected !!

Join the Group

Join WhatsApp Group