ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜೂನಿಯರ್ ಅಥ್ಲೇಟ್ ಮೀಟ್ ➤ಜ್ಞಾನೋದಯ ಬೆಥನಿಗೆ 1 ಚಿನ್ನ , 1 ಬೆಳ್ಳಿ ಮತ್ತು 2 ಕಂಚು

(ನ್ಯೂಸ್ ಕಡಬ) newskadaba.com  ನೆಲ್ಯಾಡಿ, ನ.7   ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜೂನಿಯರ್ ಅಥ್ಲೇಟ್ ಮೀಟ್ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ಆದಿತ್ಯವಾರ ನಡೆದ ಕ್ರೀಡಾಕೂಟದಲ್ಲಿ ಜ್ಞಾನೋದಯ ಬೆಥನಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಚಿನ್ನ ,ಬೆಳ್ಳಿ ಮತ್ತು ಕಂಚುಗಳನ್ನು ಪಡೆದುಕೊಂಡಿದ್ದಾರೆ.


14 ರ ವಯೋಮಾನದ ಬಾಲಕರ ವಿಭಾಗದಲ್ಲಿ 8ನೇ ತರಗತಿ ವಿದ್ಯಾರ್ಥಿ ಆದರ್ಶ್ ಶೆಟ್ಟಿ ಎತ್ತರ ಜಿಗಿತದಲ್ಲಿ ಚಿನ್ನದ ಪದಕ, ಬಾಲಕಿಯರ ವಿಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿ ರಕ್ಷಾ ಎತ್ತರ ಜಿಗಿತದಲ್ಲಿ ಕಂಚು ಮತ್ತು 16 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಮೇಘ ಮತ್ತಾಯಿ ಚಕ್ರ ಎಸೆತದಲ್ಲಿ ಬೆಳ್ಳಿ, ಮತ್ತು  ಗುಂಡು ಎಸೆತದಲ್ಲಿ ಕಂಚಿನ ಪದಕ ಗಳಿಸಿರುತ್ತಾರೆ. ದೈಹಿಕ ಶಿಕ್ಷಕರಾದ ಸುದರ್ಶನ್ ಬಂಗೇರ, ಮನೋಜ್, ಶ್ರೀಮತಿ ಅಲ್ಪೋನ್ಸಾರವರು ಮಾರ್ಗದರ್ಶನ ನೀಡಿದ್ದರು. ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒಐಸಿ ಯವರು ವಿದ್ಯಾರ್ಥಿಗಳನ್ನು ಮತ್ತು ದೈಹಿಕ ಶಿಕ್ಷಕರನ್ನು ಅಭಿನಂದಿಸಿದರು.

Also Read  ಬೆಳ್ತಂಗಡಿ: ಕುಟುಂಬ ಸಮೇತರಾಗಿ ಶ್ರೀ ಸದಾಶಿವ ದೇವಸ್ಥಾನಕ್ಕೆ ರಾಕಿಂಗ್‌ ಸ್ಟಾರ್‌ ಯಶ್‌ ಭೇಟಿ

error: Content is protected !!
Scroll to Top