ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ➤ ಅಧ್ಯಕ್ಷರಾಗಿ ಸಂಶುದ್ದೀನ್ ಸಂಪ್ಯ, ಕಾರ್ಯದರ್ಶಿಯಾಗಿ ನಾಗರಾಜ್ ಎನ್.ಕೆ‌. ಆಯ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ನ.02. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕನ್ನಡ ಪ್ರಭ ಮತ್ತು ವಾರ್ತಾಭಾರತಿಯ ಪುತ್ತೂರು ತಾಲೂಕು ವರದಿಗಾರ ಸಂಶುದ್ದೀನ್ ಸಂಪ್ಯ ಹಾಗೂ ಕಾರ್ಯದರ್ಶಿಯಾಗಿ ಉದಯವಾಣಿಯ ಕಡಬ ತಾಲೂಕು ವರದಿಗಾರ ಎನ್‌ಕೆ.ನಾಗರಾಜ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ಪುತ್ತೂರು ಗ್ರಾಮಾಂತರ ವರದಿಗಾರ ಸಿದ್ದಿಕ್ ಕುಂಬ್ರ ಮತ್ತು ಉದಯವಾಣಿ ಉಪ್ಪಿನಂಗಡಿ ವರದಿಗಾರ ಸರ್ವೇಶ್ ಕುಮಾರ್, ಕೋಶಾಧಿಕಾರಿಯಾಗಿ ಕೃಷ್ಣಪ್ರಸಾದ್ ಬಲ್ನಾಡು, ಜೊತೆ ಕಾರ್ಯದರ್ಶಿಯಾಗಿ ಜಯಕಿರಣ ಉಪ್ಪಿನಂಗಡಿ ವರದಿಗಾರ ನಜೀರ್ ಕೊಯಿಲ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಬಿ.ಟಿ.ರಂಜನ್, ಉಪ ಚುನಾವಣಾಧಿಕಾರಿಗಳಾಗಿ ಮೇಘಾ ಪಾಲೆತ್ತಡಿ ಮತ್ತು ಬಾಲಕೃಷ್ಣ ಕೊಯಿಲ ಕಾರ್ಯ ಸಹಕರಿಸಿದರು.

Also Read  ಕಾರ್ಕಳ: ಆಕಸ್ಮಿಕವಾಗಿ ಬಾವಿಗೆ ಬಿದ್ದ ದನವನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ

error: Content is protected !!
Scroll to Top