ಪಾದಚಾರಿಗೆ ಬೈಕ್ ಡಿಕ್ಕಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, .28.  ರಸ್ತೆಯನ್ನು ದಾಟಲು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದಾಗ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದು ಕುಮಾರಿ ಶ್ರಾವ್ಯನಿಗೆ ಗಾಯಗೊಂಡ ಘಟನೆ ಉಜಿರೆ ಪೇಟೆಯಲ್ಲಿ ಶನಿವಾರದಂದು ನಡೆದಿದೆ.

ಎಂ ಜಿ ಬಾಸ್ಕರ ಎಂಬವರು ತನ್ನ ಪತ್ನಿ, ಮಗಳು, ಹಾಗೂ ಮೊಮ್ಮಗಳಾದ ಶ್ರಾವ್ಯ ಎಂಬವರೊಂದಿಗೆ ಉಜಿರೆ ಪೇಟೆಯ ಅಮೃತ ಟೆಕ್ಸ್ ಟೈಲ್ಸ್ ಅಂಗಡಿಯ ಮುಂಭಾಗದಲ್ಲಿ ರಸ್ತೆಯನ್ನು ದಾಟಲು ನಿಂತಿದ್ದಾಗ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಬೈಕೊಂದು ಶ್ರಾವ್ಯ ನಿಗೆ ಡಿಕ್ಕಿ ಹೊಡೆದು, ನೆಲಕ್ಕೆ ಬಿದ್ದ ಪರಿಣಾಮ ಹಣೆಗೆ ಗಾಯಗೊಂಡು ಎರಡು ಕಾಲಿನ ಮಂಡಿ ಹಾಗೂ ಎರಡೂ ಕೈಗಳಿಗೆ ಗಾಯವಾಗಿದ್ದು, ಗಾಯಾಳುವನ್ನು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.

Also Read  ಕಡಬದ KSWS ಸಂಸ್ಥೆಯಲ್ಲಿ ಹಲವು ಉದ್ಯೋಗಗಳು - ಆಸಕ್ತರಿಂದ ಅರ್ಜಿ ಆಹ್ವಾನ

error: Content is protected !!
Scroll to Top