ಅಯೋಧ್ಯಾ ನಗರದಲ್ಲಿ 12 ನೇ ವರ್ಷದ ಸಾಮೂಹಿಕ ಗೋಪೂಜೆ ➤ ದೀಪಾವಳಿ ಕ್ರೀಡೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಅ.27. ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋದ್ಯಾನಗರ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಶ್ರೀ ರಾಮ ಭಜನಾ ಮಂದಿರ ದ ವಠಾರದಲ್ಲಿ 12ನೇ ವರ್ಷದ ಸಾಮೂಹಿಕ ಗೋಪೂಜೆ ಮತ್ತು ದೀಪಾವಳಿ ಕ್ರೀಡೋತ್ಸವ ಭಾನುವಾರ ನಡೆಯಿತು.

ಬೆಳಿಗ್ಗೆ ಸಾಮೂಹಿಕ ಗೋಪೂಜೆ, ಬಳಿಕ ನಡೆದ ಕ್ರೀಡೋತ್ಸವವನ್ನು ಪ್ರಗತಿಪರ ಕೃಷಿಕ ಕೊರಗಪ್ಪ ಗೌಡ ಉದ್ಘಾಟಿಸಿದರು. ಶ್ರೀ ರಾಮ ಭಜನಾ ಮಂದಿರ ಉಪಾದ್ಯಕ್ಷ ರಾಮಯ್ಯ ಗೌಡ ಬುಡಲೂರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಬಳೂರು ಒಕ್ಕೂಟದ ಅಧ್ಯಕ್ಷ ಗಣೇಶ್ ಗೌಡ ಎರ್ಮಡ್ಕ ಅತಿಥಿಗಳಾಗಿ ಶುಭಹಾರೈಸಿದರು. ಜಗದೀಶ್ ಸಬಳೂರು ಸ್ವಾಗತಿಸಿದರು. ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷ ಗುರುಪ್ರಸಾದ್ ಸಬಳೂರು ವಂದಿಸಿದರು. ಬಾಲಕೃಷ್ಣ ಕೊಲ್ಯ ನಿರೂಪಿಸಿದರು. ಈ ಸಂದರ್ಭ ಸಂಘದ ಹಿತೈಷಿಗಳಾಗಿದ್ದು ಅಗಲಿದ ಕೇಶವ ಗೌಡ ಓಕೆ, ಜನಾರ್ಧನ ಗೌಡ ಕೊಲ್ಯ ಆತ್ಮಕ್ಕೆ ಚಿರಶಾಂತಿಗಾಗಿ ಮೌನ ಪ್ರಾಥನೆ ಸಲ್ಲಿಸಲಾಯಿತು. ಬಳಿಕ ಕುಶಾಲಪ್ಪ ಗೌಡ ಕಡೆಂಬ್ಯಾಲು ಮೈದಾನದಲ್ಲಿ ತೆಂಗಿನಕಾಯಿ ಒಡೆಯುವ ಮೂಲಕ ಯಶಸ್ವಿಗೆ ಪ್ರಾರ್ಥಿಸಲಾಯಿತು.

Also Read  ವಿಟ್ಲ: ಸಾಲಭಾದೆಯಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ

error: Content is protected !!
Scroll to Top