ತುಂಬು ಗರ್ಭಿಣಿ ಮಹಿಳಾ ಕಾನ್ಸ್‌ಟೇಬಲ್ ನ್ನು ಬಂದೋಬಸ್ತ್ ಗೆ ನಿಯೋಜನೆ ➤ ವರದಿ ಕೇಳಿದ ಮಂಗಳೂರು ಪೊಲೀಸ್ ಆಯುಕ್ತ ಡಾ| ಪಿ.ಎಸ್.ಹರ್ಷ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.27. ತುಂಬು ಗರ್ಭಿಣಿ ಪೋಲಿಸ್ ಕಾನ್ಸ್‌ಟೇಬಲ್ ಓರ್ವರನ್ನು ಬಂದೋಬಸ್ತ್ ಕೆಲಸಕ್ಕೆ ನೇಮಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಡಾ| ಹರ್ಷ ಪಿ.ಎಸ್. ಮೂಲ್ಕಿ ಸರ್ಕಲ್ ಇನ್ಸ್‌ಪೆಕ್ಟರ್ ರವರಲ್ಲಿ ಈ ಬಗ್ಗೆ ಸ್ಪಷ್ಟೀಕರಣ ಕೇಳಿದ್ದಾರೆ.

ಅಕ್ಟೋಬರ್ 25 ರಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಜಿಲ್ಲೆಗೆ ಭೇಟಿ ನೀಡಿದ್ದು, ಈ ವೇಳೆ ಮೂಲ್ಕಿ ಬಸ್ ನಿಲ್ದಾಣದ ಬಳಿ ಬಂದೋಬಸ್ತ್ ಗಾಗಿ ತುಂಬು ಗರ್ಭಿಣಿ ಮಹಿಳಾ ಪೋಲಿಸ್ ಕಾನ್ಸ್‌ಟೇಬಲ್ ಓರ್ವರನ್ನು ನೇಮಿಸಲಾಗಿತ್ತು. ಕೈಯಲ್ಲಿ ಲಾಠಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿದ್ದ ಗರ್ಭಿಣಿ ಮಹಿಳಾ ಸಿಬ್ಬಂದಿಯನ್ನು ಕಂಡ ಸಾರ್ವಜನಿಕರು ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು, ಈ ವಿಚಾರವನ್ನು ಗಮನಿಸಿದ ಪೊಲೀಸ್ ಆಯುಕ್ತರು ಘಟನೆಯ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಗರ್ಭಿಣಿ ಮಹಿಳೆಯನ್ನು ಹೆರಿಗೆ ರಜೆಯಲ್ಲಿ ಕಳುಹಿಸುವ ಬದಲು ಬಂದೋಬಸ್ತ್ ಗೆ ನೇಮಿಸಿರುವುದರ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಉತ್ತರ ವಲಯ ಸಹಾಯಕ ಪೋಲಿಸ್ ಆಯುಕ್ತರಿಗೆ ಅದೇಶಿಸಿದ್ದಾರೆ.

error: Content is protected !!
Scroll to Top