(ನ್ಯೂಸ್ ಕಡಬ) newskadaba.com ಕಡಬ, ಅ.27. ರಾಜ್ಯ ಸರಕಾರವು ರೈತರ ಸಾಲಮನ್ನಾ ಮಾಡಿದ್ದರೂ ಡಿಸಿಸಿ ಬ್ಯಾಂಕ್ ಹಣವನ್ನು ತಮ್ಮಲ್ಲಿಯೇ ಇಟ್ಟುಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಎಂದು ಮಲೆನಾಡು ಹಿತರಕ್ಷಣಾ ವೇದಿಕೆ ಆರೋಪಿಸಿದೆ.
ಈ ಬಗ್ಗೆ ಶನಿವಾರದಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಜಿಲ್ಲಾ ಮುಖಂಡ ದಾಮೋದರ ಗುಂಡ್ಯ, ಸರಕಾರವು ಸಾಲಮನ್ನಾ ಮಾಡಿದ್ದರೂ ಎಲ್ಲಾ ರೈತರ ಖಾತೆಗೆ ಇನ್ನೂ ಹಣ ಬಂದಿಲ್ಲ. ಈ ಬಗ್ಗೆ ಸಹಕಾರಿ ಸಂಘಗಳಲ್ಲಿ ವಿಚಾರಿಸಿದಾಗ ಹಣ ಬಿಡುಗಡೆಯಾಗಿಲ್ಲ ಎಂಬ ಕಾರಣ ನೀಡಿದ್ದು, ಜಾಲತಾಣದಲ್ಲಿ ಪರಿಶೀಲನೆ ನಡೆಸಿದಾಗ ರೈತರ ಖಾತೆಗೆ ಸರಕಾರದಿಂದ ಹಣ ಬಿಡುಗಡೆಯಾಗಿರುವುದು ಹಾಗೂ ಕೆಲವು ರೈತರ ಖಾತೆಗೆ ಹಣ ಬಂದು ಅಪೆಕ್ಸ್ ಬ್ಯಾಂಕಿಗೆ ಹಿಂದೆ ಹೋಗಿರುವುದು ಕಂಡು ಬಂದಿದೆ. ದಾಖಲಾತಿಗಳ ನೊಂದಾವಣೆಯಲ್ಲಿ ಲೋಪದೋಷಗಳನ್ನು ಸರಿಪಡಿಸಲು ಕಾಲಾವಕಾಶ ನೀಡಿ ಕಟ್ಟ ಕಡೆಯ ರೈತನಿಗೂ ಯೋಜನೆಯ ಸೌಲಭ್ಯ ದೊರೆಯುವಂತಾಗಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಮಾಡುವುದಾಗಿ ದಾಮೋದರ ಗೌಡ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ಕಡಬ ತಾಲೂಕು ಮುಖಂಡರಾದ ವಿಜಯ್ ಕುಮಾರ್ ಎರ್ಕ, ಹರೀಶ್ ಕೋಡಂದೂರು, ನಾಗೇಶ್ ಬೀಡು ಹೊಸಮನೆ ಮರ್ದಾಳ, ಶಂಕರ ಮರ್ದಾಳ ಉಪಸ್ಥಿತರಿದ್ದರು.