ಬೆಳ್ಳಾರೆ: ಅಕ್ರಮ ಗಾಂಜಾ ಸಾಗಾಟ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಅ.26. ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 200 ಗ್ರಾಂ ಗಾಂಜಾ ಹಾಗೂ ಬೊಲೆರೋ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಸುಳ್ಯ ತಾಲೂಕು ಬೆಳ್ಳಾರೆ ಸಮೀಪದ ಅಯ್ಯನಕಟ್ಟೆ ನಿವಾಸಿ ನಾಸಿರ್(25) ಎಂದು ಗುರುತಿಸಲಾಗಿದೆ. ಆರೋಪಿಯು ಬೊಲೆರೋ ವಾಹನದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತ್ಯಾಗರಾಜನಗರ ಎಂಬಲ್ಲಿ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದು, ಬಂಧಿತನಿಂದ ಸುಮಾರು 4,000 ರೂ ಗಳ ಮೌಲ್ಯದ 200 ಗ್ರಾಂ ಗಾಂಜಾ ಹಾಗೂ ಸುಮಾರು 4,00,000 ಮೌಲ್ಯದ ಬೊಲೆರೊ ವಾಹನವನ್ನು ವಶಪಡಿಸಲಾಗಿದೆ.

Also Read  ಮಂಗಳೂರು: ಬಿಜೆಪಿ ಸಕ್ರಿಯ ಕಾರ್ಯಕರ್ತ, ವಕ್ಫ್ ಬೋರ್ಡ್ ಸದಸ್ಯನಿಗೆ ಜೀವಬೆದರಿಕೆ

error: Content is protected !!
Scroll to Top