ಕಡಬ ಗಜಾನನ ರೈಸ್ ಮಿಲ್ ಮಾಲಕ ನಾಗರಾಜ್ ಆಚಾರ್ಯ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಕಡಬ, ಅ.26. ಕಡಬ ನಿವಾಸಿ, ಗಜಾನನ ರೈಸ್ ಮಿಲ್ ನ ಮಾಲೀಕ ನಾಗರಾಜ ಆಚಾರ್ಯ ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಶನಿವಾರದಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕಡಬದಲ್ಲಿ ಗಜಾನನ ರೈಸ್ ಮಿಲ್‌ ನಡೆಸುತ್ತಿದ್ದ ಇವರು ಚಿರಪರಿಚಿತರಾಗಿದ್ದರು. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಇವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಅಪರಾಹ್ನ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Also Read  ಕರಾವಳಿ ಜಿಲ್ಲೆಯಲ್ಲಿ ಕೊರೋನಾ ಮೂರನೇ ಅಲೆಯ ಭೀತಿ ಹಿನ್ನೆಲೆ ➤ ಜಿಲ್ಲಾಧಿಕಾರಿಯಿಂದ ಕೇರಳ ಗಡಿ ತಪಾಸಣೆ

error: Content is protected !!
Scroll to Top