ಮರ್ಧಾಳ ಸೇರಿದಂತೆ ಜಿಲ್ಲೆಯ ಹಲವೆಡೆ ಗ್ರಾ.ಪಂ. ಖಾಲಿ ಸ್ಥಾನಗಳ ಚುನಾವಣೆಗೆ ಮುಹೂರ್ತ ಫಿಕ್ಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ.26. ವಿವಿಧ ಕಾರಣಗಳಿಂದ ತೆರವಾಗಿರುವ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‍ಗಳ ಖಾಲಿ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಿಸಿದೆ.

ಮೂಡಬಿದ್ರೆ ತಾಲೂಕಿನ ದರೆಗುಡ್ಡೆ ಗ್ರಾಮ ಪಂಚಾಯತ್‍ನ ದರೆಗುಡ್ಡೆ-2, ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮ ಪಂಚಾಯತ್‍ನ ಮೂಡನಡುಗೋಡು-2, ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮ ಪಂಚಾಯತ್‍ನ ಬಜತ್ತೂರು-2 ಮತ್ತು ಮರ್ಧಾಳ ಗ್ರಾಮ ಪಂಚಾಯತ್‍ನ ನೆಕ್ಕಿಲಾಡಿ-2, ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಗ್ರಾಮ ಪಂಚಾಯತ್‍ನ ಹತ್ಯಡ್ಕ-2, ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮ ಪಂಚಾಯತ್‍ನ ಕಲ್ಮಡ್ಕ-2 ಮತ್ತು ಬಳ್ಪ ಗ್ರಾಮ ಪಂಚಾಯತ್‍ನ ಕೇನ್ಯ-1 ಗ್ರಾಮ ಪಂಚಾಯತ್ ಕ್ಷೇತ್ರಗಳಿಗೆ ಉಪ ಚುನಾವಣೆ ಚುನಾವಣೆ ನಡೆಯಲಿದೆ. ಚುನಾವಣೆ ನಡೆಯುವ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ಅಕ್ಟೋಬರ್ 28 ರಿಂದ ನವೆಂಬರ್ 14 ರವರೆಗೆ ಜಾರಿಯಲ್ಲಿರುತ್ತದೆ.

Also Read  ರಾಮಕುಂಜ: ಹಳೆನೇರೆಂಕಿ ಗೊಂಚಲು ಮಹಾಸಭೆ

ಚುನಾವಣೆ ಅಧಿಸೂಚನೆ ಅಕ್ಟೋಬರ್ 28ರಂದು ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 31. ನಾಮಪತ್ರಗಳನ್ನು ಪರಿಶೀಲಿಸುವ ದಿನ ನವೆಂಬರ್ 2, ಉಮೇದುವಾರರನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ನವೆಂಬರ್ 4, ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನ ಮತ್ತು ಸಮಯ ನವೆಂಬರ್ 12 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ. ಮರು ಮತದಾನ ಇದ್ದಲ್ಲಿ ಮತದಾನ ನಡೆಸಬೇಕಾದ ದಿನ ಮತ್ತು ಸಮಯ ನವೆಂಬರ್ 13 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ. ಮತಗಳ ಎಣಿಕೆ ನವೆಂಬರ್ 14 ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಶೀಘ್ರವೇ ರಾಜ್ಯದಲ್ಲಿ ಆನ್ಲೈನ್ 'ಗೇಮ್' ನೀಷೇದಕ್ಕೆ ಕಾನೂನು

error: Content is protected !!
Scroll to Top