(ನ್ಯೂಸ್ ಕಡಬ) newskadaba.com ಪುತ್ತೂರು, ಅ.25. ಸ್ನೇಹಿತನೊಂದಿಗೆ ಗುಂಡ್ಯಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದ ಯುವಕ ವಾಪಾಸು ಬಾರದೆ ನಾಪತ್ತೆಯಾದ ಘಟನೆ ಪುತ್ತೂರಿನಿಂದ ವರದಿಯಾಗಿದೆ.
ನಾಪತ್ತೆಯಾದ ಯುವಕನನ್ನು ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ದೇರಣೆ ನಿವಾಸಿ ಸಂತೋಷ್ ಕುಮಾರ್ ರವರ ಪುತ್ರ ಆದರ್ಶ್ ಡಿ.ಎಸ್(20) ಎಂದು ಗುರುತಿಸಲಾಗಿದೆ. ಈತ ಪುತ್ತೂರಿನ ಖಾಸಗಿ ಕಾಲೇಜಿನ 2ನೇ ವರ್ಷದ ಡಿಪ್ಲೋಮಾ (ಅಟೋ ಮೊಬೈಲ್) ವ್ಯಾಸಂಗ ಮಾಡುತ್ತಿದ್ದು, ಪಿ.ಜಿ.ಯಲ್ಲಿ ಉಳಕೊಂಡು ಕಾಲೇಜಿಗೆ ಹೋಗಿ ಬರುತ್ತಿದ್ದ. ಈ ಮಧ್ಯೆ 15 ದಿನಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದ್ದು, ಅಕ್ಟೋಬರ್ 22 ರಂದು ಪಿ.ಜಿ.ಯಲ್ಲಿದ್ದ ಸ್ನೇಹಿತನೊಂದಿಗೆ ಗುಂಡ್ಯದಲ್ಲಿರುವ ಆತನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವನು ಅತ್ತ ಪಿ.ಜಿ ಗೂ ಹೋಗದೆ, ಇತ್ತ ಮನೆಗೂ ಬಾರದೆ ಕಾಣೆಯಾಗಿರುತ್ತಾನೆ. ಸಂಬಂಧಿಕರ ಮನೆಯಲ್ಲಿ ಎಲ್ಲಾ ಹುಡುಕಾಡಿದರೂ ಎಲ್ಲೂ ಪತ್ತೆಯಾಗದೆ ಇರುವುದರಿಂದ ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.