ಮತದಾರರ ಪಟ್ಟಿ ಪರಿಶೀಲನೆಯಲ್ಲಿ ಹಿಂದುಳಿದ ದಕ್ಷಿಣ ಕನ್ನಡ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.25. ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿ ಸಮಗ್ರ ಪರಿಶೀಲನೆ ಪ್ರಾರಂಭಗೊಂಡು ತಿಂಗಳುಗಳಾಗುತ್ತಿದ್ದರೂ ಬುದ್ದಿವಂತರ ಜಿಲ್ಲೆಯೆಂದು ಕರೆಸಿಕೊಂಡಿರುವ ದಕ್ಷಿಣ ಕನ್ನಡದಲ್ಲಿ ನಿರೀಕ್ಷಿತ ಸ್ಪಂದನೆ ಲಭಿಸಿಲ್ಲ.

ರಾಜ್ಯದಲ್ಲಿ ಇದುವರೆಗೆ ಶೇ. 53ರಷ್ಟು ಮತದಾರರು ಪರಿಶೀಲನೆ/ತಿದ್ದುಪಡಿ ಮಾಡಿಕೊಂಡಿದ್ದರೂ ದ.ಕ. ಜಿಲ್ಲೆಯಲ್ಲಿ ಮಾತ್ರ ಪ್ರಗತಿ ನಿರಾಸಾದಾಯಕವಾಗಿದ್ದು, 26ನೇ ಸ್ಥಾನದಲ್ಲಿದೆ. ಹತ್ತಿರದ ಉಡುಪಿ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ರಾಜ್ಯದಲ್ಲಿ 3ನೇ ಸ್ಥಾನದಲ್ಲಿದೆ.

ಉಡುಪಿಯಲ್ಲಿ 10,06,684 ಮತದಾರರ ಪೈಕಿ 7,23,533 ಮಂದಿ (ಶೇ.72) ಮತ್ತು ದ.ಕ.ದ 17,22,608 ಮತದಾರರ ಪೈಕಿ 8,10,080 ಮಂದಿ (ಶೇ. 47) ಆನ್‌ಲೈನ್‌ನಲ್ಲಿ ಮತ್ತು ಮುಖತಃ ಭೇಟಿಯಾಗಿ ವಿವರವನ್ನು ಪರಿಶೀಲಿಸಿದ್ದಾರೆ. ಮಂಡ್ಯ ಮೊದಲ ಸ್ಥಾನದಲ್ಲಿದ್ದರೆ ಚಿತ್ರದುರ್ಗ 2ನೇ ಸ್ಥಾನದಲ್ಲಿದ್ದು, ಬೆಳಗಾವಿ ಮೂರನೇ ಸ್ಥಾನದಲ್ಲಿದೆ.

Also Read  ಗೃಹಲಕ್ಷ್ಮೀ ಹಣ ಬಿಡುಗಡೆ ಬಗ್ಗೆ ಸಚಿವೆ ಹೆಬ್ಬಾಳಕರ್ ಮಹತ್ವದ ಮಾಹಿತಿ

ಮತದಾರರಿಗೆ ಪ್ರತಿ ವರ್ಷ ಸ್ವಯಂ ಪರಿಶೀಲನೆಗೆ ಅವಕಾಶವಿರುತ್ತದೆ. ಬಿಎಲ್‌ಒಗಳು ಮಾತ್ರವಲ್ಲದೆ ಮತದಾರರು ಸ್ವಯಂ ಪರಿಶೀಲನೆ ನಡೆಸಲು ಅವಕಾಶ ಒದಗಿಸಲಾಗಿದೆ. ಮತದಾರರು voter helpline ಆ್ಯಪ್‌ ಮೂಲಕ ಮೊಬೈಲ್ ನಲ್ಲಿ ಪರಿಶೀಲನೆ ಮಾಡಬಹುದಾಗಿದೆ.

 

ಸೇವಾಸಿಂಧು ಮತ್ತಿತರ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ, ಮತಗಟ್ಟೆ ಅಧಿಕಾರಿಯ ಮೂಲಕ, ತಾಲೂಕು ಕಚೇರಿ ಅಥವಾ ಎಸಿ ಕಚೇರಿಗಳಲ್ಲಿ ಪರಿಶೀ ಲಿಸಬಹುದು. ಮತದಾರರ ಸಹಾಯವಾಣಿ 1950ಕ್ಕೆ ಕರೆ ಮಾಡಿಯೂ ವಿಚಾರಿಸಬಹುದು. ವೆಬ್‌ ಪೋರ್ಟಲ್‌ www.nvsp.in ನಲ್ಲಿಯೂ ಪರಿಶೀಲಿಸಬಹುದು.

ಪ್ರತೀ ವರ್ಷವೂ ಮತದಾರರ ಪಟ್ಟಿ ಪರಿಶೀಲಿಸಿ ಇದರಲ್ಲಿನ ಕೆಲವು ಲೋಪಗಳನ್ನು ಮಾತ್ರ ಸರಿಪಡಿಸಲಾಗುತ್ತಿತ್ತು. ಆದರೆ ಈ ಬಾರಿ ವಿಶೇಷವಾಗಿ ಸಮಗ್ರ ಪರಿಶೀಲನೆ ನಡೆಸಿ ಲೋಪದೋಷಗಳು ಇಲ್ಲದಂತೆ ಮಾಡುವ ಉದ್ದೇಶ ಇದೆ. ಇದರಿಂದಾಗಿ ಮತದಾರರ ಬಗ್ಗೆ ವ್ಯವಸ್ಥಿತ ಡಾಟಾ ಬೇಸ್‌ ಸೃಷ್ಟಿಸಿದಂತಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಹೇಳಿದ್ದಾರೆ.

Also Read  ಮಾಧ್ಯಮ ಸ್ವಾತಂತ್ರ್ಯದ ದಮನ ಖಂಡನೀಯ- ಎಸ್ಸೆಸ್ಸೆಫ್

error: Content is protected !!
Scroll to Top