➤➤ Big Breaking News ನಿಂತಿದ್ದ ಟ್ರ್ಯಾಕ್ಟರಿಗೆ ಕಾರು ಢಿಕ್ಕಿ ➤ ಐವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ತುಮಕೂರು, ಅ.24. ಜಲ್ಲಿ ತುಂಬಿದ್ದ ಟ್ರ್ಯಾಕ್ಟರ್ ಗೆ ಮಾರುತಿ ಸ್ವಿಫ್ಟ್ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟು, ಓರ್ವ ತೀವ್ರ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ಕುಣಿಗಲ್ ನ ಹೊಸಕೆರೆ ಎಂಬಲ್ಲಿ ನಡೆದಿದೆ.

ಮೃತರನ್ನು ಕಾರು ಚಾಲಕ ಬೆಂಗಳೂರು ಮೂಲದ ಕಿರಣ್(28) ರಾಜಣ್ಣ(50) ಮೋಹನ್ (22) ಮಧು(24) ನತ್ತಯ ರಂಗಸ್ವಾಮಿ (55) ಎಂದು ಗುರುತಿಸಲಾಗಿದೆ. ಕುಣಿಗಲ್ ನ ಹೊಸಕೆರೆ ಸಮೀಪದ ದೊಡ್ಡ ಕಲ್ಲಹಳ್ಳಿಯಲ್ಲಿ ಹಬ್ಬ ಮುಗಿಸಿ ವಾಪಸಾಗುವ ಸಂದರ್ಭದಲ್ಲಿ ರಸ್ತೆ ಬದಿ ಜಲ್ಲಿ ತುಂಬಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಗೆ ಕಾರು ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಅಮೃತೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

Also Read  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ...!

error: Content is protected !!
Scroll to Top