ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ರನ್ನು ನಿಂದಿಸಿದ ಕಡಬದ ವ್ಯಕ್ತಿಗೆ ಬಂತು ಆಪತ್ತು

Nalin Kumar kateel

(ನ್ಯೂಸ್ ಕಡಬ) newskadaba.com ಕಡಬ, ಅ.23. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ನಿಂದಿಸಿ ಸಂದೇಶ ರವಾನಿಸಿದ ಆರೋಪಡಿಯಲ್ಲಿ ಹಳೆನೇರಂಕಿ ಗ್ರಾಮದ ಹಿರಿಂಜ ನಿವಾಸಿ ಬಾಬು ಗೌಡ ಎಂಬವರ ಪುತ್ರ ಗಣೇಶ್ ಎಂಬಾತನ ವಿರುದ್ದ ಬಿಜೆಪಿ ಮುಖಂಡರು ಕಡಬ ಠಾಣೆಗೆ ದೂರು ನೀಡಿದ್ದಾರೆ.

ನಳೀನ್ ಕುಮಾರ್ ಕಟೀಲು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಏಕವಚನದಲ್ಲಿ ಸಂಭೋದಿಸಿದ ಅಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಗಣೇಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ಸುಳ್ಯಮಂಡಲ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ರಾವ್ ಆತೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ
ನಡೆಸುತ್ತಿದ್ದಾರೆ.

Also Read  ಬೆಂಗಳೂರಿನಲ್ಲಿ ಮುಂಜಾನೆಯಿಂದ ಧಾರಾಕಾರ ಮಳೆ ➤ ಹಲವೆಡೆ ಮನೆಯೊಳಗೆ ನುಗ್ಗಿದ ನೀರು

error: Content is protected !!
Scroll to Top