ಪಶ್ಚಿಮ ವಲಯದ 47 ಸಬ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ ➤ ಉಪ್ಪಿನಂಗಡಿ ಎಸ್ಐ ನಂದಕುಮಾರ್, ಬೆಳ್ಳಾರೆ ಎಸ್ಐ ಈರಯ್ಯ ವರ್ಗಾವಣೆ

(ನ್ಯೂಸ್ ಕಡಬ) newskadaba.com ಕಡಬ, ಅ.23. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪಶ್ಚಿಮ ವಲಯದ ಹಲವು ಸಬ್ ಇನ್ಸ್‌ಪೆಕ್ಟರ್ ಗಳನ್ನು ವಿವಿಧೆಡೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.

ಉಪ್ಪಿನಂಗಡಿ ಠಾಣಾ ಎಸ್ಐ ನಂದಕುಮಾರ್ ರವನ್ನು ಬೆಳ್ತಂಗಡಿ ಠಾಣೆಗೆ ವರ್ಗಾಯಿಸಲಾಗಿದ್ದು, ಬೆಳ್ಳಾರೆ ಠಾಣಾ ಎಸ್ಐ ಈರಯ್ಯ ರವರನ್ನು ಉಪ್ಪಿನಂಗಡಿ ಠಾಣೆಗೆ ನೇಮಿಸಲಾಗಿದೆ. ಪುತ್ತೂರು ನಗರ ಠಾಣಾ ಎಸ್ಐ ಚೆಲುವಯ್ಯರವರನ್ನು ಪುತ್ತೂರು ಸಂಚಾರಿ ಠಾಣೆಗೆ ವರ್ಗಾಯಿಸಲಾಗಿದ್ದು, ಧರ್ಮಸ್ಥಳ ಠಾಣಾ ಎಸ್ಐ ಅವಿನಾಶ್ ರವರನ್ನು ಬಂಟ್ವಾಳ ನಗರ ಠಾಣೆಗೆ ಮತ್ತು ವಿಟ್ಲ ಠಾಣಾ ಎಸ್ಐ ಯಲ್ಲಪ್ಪ ರವರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಠಾಣೆಗೆ ವರ್ಗಾಯಿಸಲಾಗಿದೆ. ಒಟ್ಟು 47 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರವರನ್ನು ವರ್ಗಾಯಿಸಿ ಆದೇಶಿಸಲಾಗಿದ್ದು, ವರ್ಗಾವಣೆ ಗೊಂಡ ಸ್ಥಳಗಳಲ್ಲಿ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

Also Read  ಮುಲ್ಕಿ :ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ

error: Content is protected !!
Scroll to Top