➤➤ Breaking News ಮಂಗಳೂರು: ಮಸೀದಿಯ ಒಳಗೆ ನುಗ್ಗಿದ ಕಾರು ➤ ಐವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.22: ಚಾಲಕನ‌ ನಿಯಂತ್ರಣ ತಪ್ಪಿದ ಓಮ್ನಿ ಕಾರೊಂದು ಮಸೀದಿಯ ಆವರಣ ಗೋಡೆಯೊಳಗೆ ನುಗ್ಗಿದ ಪರಿಣಾಮ ಚಾಲಕ ಸೇರಿ ಒಟ್ಟು ಐವರು ಗಾಯಗೊಂಡ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.

ಬಿ.ಸಿ.ರೋಡ್ ನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮಾರುತಿ ಓಮ್ನಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫರಂಗಿಪೇಟೆ ಸಮೀಪದ ಹತ್ತನೇ ಮೈಲು ಕಲ್ಲು ಎಂಬಲ್ಲಿ ಚಾಲಕನ‌ ನಿಯಂತ್ರಣ ತಪ್ಪಿ ಮಸೀದಿಯ ಆವರಣ ಗೋಡೆಯನ್ನು ಹಾರಿ ಮಸೀದಿಯ ಒಳಗೆ ನುಗ್ಗಿದೆ. ಈ ವೇಳೆ ಮಸೀದಿ ಆವರಣದಲ್ಲಿದ್ದ ಇಬ್ಬರಿಗೆ ಹಾಗೂ ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ.

Also Read  ಭೂಕಂಪನದಿಂದ ಹಾನಿಯುಂಟಾದ ಮನೆಗಳಿಗೆ ತಕ್ಷಣವೇ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವಂತೆ ಯು.ಟಿ.ಖಾದರ್ ಅವರಿಗೆ ಶೌವಾದ್ ಗೂನಡ್ಕ ಮನವಿ

error: Content is protected !!
Scroll to Top