ಕಡಬ: ಭಿಕ್ಷುಕನಿಂದ ಹಣ ದೋಚಿ ಪರಾರಿಗೆ ಯತ್ನಿಸಿದ ಮಧ್ಯ ವಯಸ್ಕ ➤ ಸಾರ್ವಜನಿಕರಿಂದಾಗಿ ಹಣ ವಾಪಸ್ – ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಕಡಬ, ಅ.19. ಅಂಗವಿಕಲ ಭಿಕ್ಷುಕನೋರ್ವ ಕೂಡಿಟ್ಟ ಹಣವನ್ನು ದೋಚಲು ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಹಣವನ್ನು ವಾಪಾಸ್ ಕೊಡಿಸಿದ ಘಟನೆ ಶನಿವಾರದಂದು ಕಡಬದಲ್ಲಿ ನಡೆದಿದೆ.

ಕಡಬ ಪರಿಸರದಲ್ಲಿ ಸಾಧಾರಣವಾಗಿ ಕಾಣಸಿಗುವ ಅಂಗವಿಕಲ ಭಿಕ್ಷುಕನೋರ್ವನಿಂದ ಶನಿವಾರ ಬೆಳಿಗ್ಗೆ ಕಡಬದ ಮಧ್ಯ ವಯಸ್ಕ ವ್ಯಕ್ತಿಯೋರ್ವರು ಹಣವನ್ನು ಲಪಟಾಯಿಸಿ ಪರಾರಿಯಾಗುತ್ತಿದ್ದುದನ್ನು ಕಂಡ ಸಾರ್ವಜನಿಕರು ಹಿಡಿದಿಟ್ಟಿದ್ದಾರೆ‌. ನಂತರ ಕದ್ದ ಹಣವನ್ನು ಹಿಂತಿರುಗಿಸಿದ ವ್ಯಕ್ತಿ ಹಣವನ್ನು ಹಿಂತಿರುಗಿಸಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Also Read  ಕಡಬ: ಖಾಸಗಿ ಶಾಲಾ ವಿದ್ಯಾರ್ಥಿಗಳಲ್ಲಿ ಸಾಂಕ್ರಾಮಿಕ ರೋಗ ಪತ್ತೆ ಹಿನ್ನೆಲೆ ➤ ಒಂದು ವಾರ ಶಾಲೆ ರಜೆ

error: Content is protected !!
Scroll to Top