ಕಡಬ: ಕುಮಾರಧಾರ ನದಿಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.16. ಗಾಳ ಹಾಕಲೆಂದು ಹೋದ ವ್ಯಕ್ತಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರದಂದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಬಳ್ಪ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಹುಡುಕಾಡಿದಾಗ ಕಡಬ ಸಮೀಪದ ಕೋಡಿಂಬಾಳದ ಮಜ್ಜಾರು ಬಳಿ ಕುಮಾರಧಾರ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಬಳ್ಪ ಗ್ರಾಮದ ಕೊನ್ನಡ್ಕ ನಿವಾಸಿ ಪುಟ್ಟವೇರ ಎಂಬವರು ಪುತ್ರ ಗುರುರಾಜ್ ಎಂದು ಗುರುತಿಸಲಾಗಿದೆ. ಅಕ್ಟೋಬರ್ 14ರಂದು ಗಾಳ ಹಾಕಿ ಮೀನು ಹಿಡಿಯಲೆಂದು ಕುಮಾರಧಾರ ನದಿಗೆ ತೆರಳಿದ್ದ ಗುರುರಾಜ್ ರಾತ್ರಿಯಾದರೂ ಹಿಂತಿರುಗಿ ಬರದಿದ್ದುದರಿಂದ ಅಕ್ಟೋಬರ್ 15ರಂದು ಮೃತನ ಸಹೋದರ ರಾಮು ಎಂಬುವವರು ಸುಬ್ರಹ್ಮಣ್ಯ ಪೊಲೀಸರಿಗೆ ನಾಪತ್ತೆ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ ಸುಬ್ರಹ್ಮಣ್ಯ ಪೋಲೀಸರು ಕಾಣೆಯಾದ ವ್ಯಕ್ತಿ ಗಾಳ ಹಾಕಲು ಹೋದ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ನೀರಿಗೆ ಜಾರಿ ಬಿದ್ದಿರುವ ಕುರುಹುಗಳು ಕಂಡು ಬಂದಿದೆ.

Also Read  ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ➤ ಇಫ್ಕೋ ಕಂಪನಿವತಿಯಿಂದ ರಸಗೊಬ್ಬರ ವಿಶೇಷ ರಿಯಾಯತಿ ದರದಲ್ಲಿ ಮಾರಾಟ

ಈ ಬಗ್ಗೆ ಬುಧವಾರದಂದು ಬೆಳಗ್ಗೆ ಕಾರ್ಯಾಚರಣೆ ಕೈಗೆತ್ತಿಕೊಂಡ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಎಎಸ್ಸೈ ಚಂದಪ್ಪ ಗೌಡ ಹಾಗೂ ಪುತ್ತೂರು ಅಗ್ನಿಶಾಮಕದಳ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿ. ಸುಂದರ್ ನೇತೃತ್ವದ ತಂಡ ಕುಮಾರಧಾರಾ ನದಿಯಲ್ಲಿ ಹುಡುಕಾಟ ಆರಂಭಿಸಿದೆ. ಬೆಳಗಿನಿಂದ ಹುಡುಕಾಟ ನಡೆಸಿದ ತಂಡಕ್ಕೆ ಸಂಜೆ ವೇಳೆ ಕಡಬ ತಾಲೂಕಿನ ಕೋಡಿಂಬಾಳದ ಮಜ್ಜಾರು ಸಮೀಪ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸಮುದಾಯ ಆಸ್ಪತ್ರೆಗೆ ರವಾನಿಸಲಾಗಿದೆ.

error: Content is protected !!
Scroll to Top