ಬಹು ನಿರೀಕ್ಷಿತ ‘ಸವರ್ಣ ದೀರ್ಘ ಸಂಧಿ’ ಅಕ್ಟೋಬರ್ 18 ರಂದು ತೆರೆಗೆ ➤ ಚಿತ್ರದ ನಿರ್ಮಾಪಕರಾಗಿ ಕಡಬದ ಲೂಷಿಂಗ್ಟನ್

(ನ್ಯೂಸ್ ಕಡಬ) newskadaba.com ಕಡಬ, ಅ.16. ತುಳು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದ ‘ಚಾಲಿಪೋಲಿಲು’ ಚಿತ್ರದ ಯಶಸ್ಸಿಗೆ ಕಾರಣಕರ್ತರಾಗಿದ್ದ ವೀರೇಂದ್ರ ಶೆಟ್ಟಿಯವರು ಇದೀಗ ‘ಸವರ್ಣದೀರ್ಘ ಸಂಧಿ’ ಕನ್ನಡ ಚಿತ್ರದ ಮೂಲಕ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ.

ಅಕ್ಟೋಬರ್ 18 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ‘ಸವರ್ಣ ದೀರ್ಘ ಸಂಧಿ’ ಕನ್ನಡ ಚಲನಚಿತ್ರವು ಟ್ರೈಲರ್ ಹಾಗೂ ಹಾಡುಗಳಿಂದಲೇ ಸದ್ದು ಮಾಡುತ್ತಿದೆ‌. ಚಿತ್ರದ ನಾಯಕ ನಟನಾಗಿ ವಿರೇಂದ್ರ ಶೆಟ್ಟಿ ಕಾಣಿಸಿಕೊಂಡಿದ್ದು, ಪತ್ರಕರ್ತ ಅಜಿತ್ ಹನುಮಕ್ಕನವರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿಯವರ ಸಾಹಿತ್ಯದೊಂದಿಗೆ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ.

Also Read  ಗಣರಾಜ್ಯೋತ್ಸವ ನೌಕಾಪಡೆ ತಂಡಕ್ಕೆ ಮಂಗಳೂರಿನ ಲೆ|ಕ ದಿಶಾ ಅಮೃತ್ ನೇತೃತ್ವ !

‘ಸವರ್ಣ ದೀರ್ಘ ಸಂಧಿ’ ಸಿನೆಮಾದ ನಿರ್ಮಾಪಕರಾಗಿ ಕಡಬದ ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ಬಂಕ್ ಮಾಲಕ ಲೂಷಿಂಗ್ಟನ್ ಥಾಮಸ್, ನಟ ವೀರೇಂದ್ರ ಶೆಟ್ಟಿ, ಮನೋಮೂರ್ತಿ, ಹೇಮಂತ್ ಕುಮಾರ್ ಸೇರಿ ನಿರ್ಮಾಣ ಮಾಡಿದ್ದಾರೆ. ಮಲಯಾಳಂನ ‘ಉಸ್ತಾದ್ ಹೊಟೇಲ್’ ಖ್ಯಾತಿಯ ಲೋಕನಾಥನ್ ಶ್ರೀನಿವಾಸ್ ಛಾಯಾಗ್ರಹಣವಿದೆ. ಸುರೇಂದ್ರ ಬಂಟ್ವಾಳ್, ಪದ್ಮಜಾರಾವ್, ರವಿಭಟ್, ನಿರಂಜನ್ ದೇಶಪಾಂಡೆ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.

error: Content is protected !!
Scroll to Top