ಕುಮಾರ ಪರ್ವತ ಚಾರಣಕ್ಕೆಂದು ತೆರಳಿದ್ದ ಯುವತಿಯ ಕಾಲು ಮುರಿತ ➤ ಯುವತಿಯನ್ನು ಏಳು ಕಿ.ಮೀ. ಹೊತ್ತು ತಂದ ಸುಬ್ರಹ್ಮಣ್ಯದ ಯುವಕರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.15. ಕುಮಾರ ಪರ್ವತ ಚಾರಣಕ್ಕೆಂದು ತೆರಳಿದ್ದ ತಂಡದ ಯುವತಿಯೋರ್ವಳು ಜಾರಿ ಬಿದ್ದು ಕಾಲು ಮುರಿತಕ್ಕೊಳಗಾಗಿದ್ದರಿಂದ ಸುಬ್ರಹ್ಮಣ್ಯದ ಯುವಕರು ಸುಮಾರು ಏಳು ಕಿಲೊಮೀಟರ್ ದೂರದವರೆಗೆ ಆಕೆಯನ್ನು ಹೊತ್ತುಕೊಂಡು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಿದ ಘಟನೆ ಮಂಗಳವಾರದಂದು ನಡೆದಿದೆ.

 

ಸೋಮವಾರದಂದು ಬೆಂಗಳೂರಿನಿಂದ ಆಗಮಿಸಿದ್ದ ಸುಮಾರು ಇಪ್ಪತ್ತ ಮೂರು ಜನರ ತಂಡವೊಂದು ಕುಮಾರಪರ್ವತ ಚಾರಣಕ್ಕೆಂದು ತೆರಳಿದ್ದು, ಮಂಗಳವಾರದಂದು ಹಿಂತಿರುಗುತ್ತಿದ್ದ ವೇಳೆ ತಂಡದಲ್ಲಿದ್ದ ಯುವತಿಯೋರ್ವಳು ಜಾರಿ ಬಿದ್ದು ಕಾಲು ಮುರಿತಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪರ್ವತದ ಅರಣ್ಯಾಧಿಕಾರಿಗಳು ಸುಬ್ರಮಣ್ಯ ದ ಯುವಕರಿಗೆ ನೀಡಿದ ಮಾಹಿತಿ ಯಂತೆ ಜೀಪು ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ಕುಸುಮಾಧರ, ಧರ್ಮಪಾಲ, ಗೋಪಾಲ್, ಕೃಷ್ಣ ಕುಮಾರ್ ಶೆಟ್ಟಿ, ಜೀವನ್, ಸುಂದರ ಗೌಡ ಚೇರು ಸೇರಿಕೊಂಡು ಮರದ ಕೋಲುಗಳನ್ನು ಉಪಯೋಗಿಸಿ ಸ್ಟ್ರೆಚರ್ ಮಾದರಿಯನ್ನು ತಯಾರಿಸಿ ಅದರ ಮೇಲೆ ಮಲಗಿಸಿ ಸುಮಾರು ಏಳು ಕಿಲೋಮೀಟರ್ ಹೆಗಲ ಮೇಲೆ ಹೊತ್ತುಕೊಂಡು ಬಂದು ರಕ್ಷಣೆ ಮಾಡಿದ್ದಾರೆ. ಯುವಕರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!

Join the Group

Join WhatsApp Group