ಬೆಳ್ಳಾರೆ: ಆರೋಗ್ಯ ಮಾಹಿತಿ ಶಿಬಿರ, ಸನ್ಮಾನ ಕಾರ್ಯಕ್ರಮ

ಬೆಳ್ಳಾರೆ : ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ , ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಆರೋಗ್ಯ ಮಾಹಿತಿ ಶಿಬಿರ ,ಸನ್ಮಾನ ಕಾರ್ಯ ಕ್ರಮ ಅಕ್ಟೋಬರ್ 12 ರಂದು ನಡೆಯಿತು. ಸುಳ್ಯ ತಾಲೂಕು ಎಸ್ಕೆ ಎಸ್ ಎಸ್ ಎಫ್ ಅಧ್ಯಕ್ಷ ತ್ವಬೀಬ್ ಹಸನ್ ಅರ್ಶದಿ ಬೆಳ್ಳಾರೆ ಉದ್ಘಾಟಿಸಿ, ದುವಾ ಕೆ ನೇತೃತ್ವ ನೀಡಿ ಮಾತನಾಡಿದರು.

ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಯು.ಹೆಚ್. ಅಬೂಬಕ್ಕರ್ ಸಭೆಯ ಅಧ್ಯಕ್ಷ ತೆ ವಹಿಸಿದ್ದರು. ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಮಾಜಿ ಮುದರ್ರಿಸ್ ತ್ವಬೀಬ್ ಶಾಫಿ ಇರ್ಫಾನಿ ಫೈಝಿ ಆರೋಗ್ಯ ಮಾಹಿತಿ ಕುರಿತು ವಿಷಯ ಮಂಡಿಸಿ ,ಪ್ರಸಕ್ತ ವೈದ್ಯಲೋಕಕ್ಕೂ ಪ್ರವಾದಿ ಚಿಕಿತ್ಸಾ ಕ್ಕೂ ಹೋಲಿಸಿದರೆ ಅಜಾಗಜಾಂತರ ವ್ಯತ್ಯಾಸ ವಿದೆ.ಆಧುನಿಕ ಯುಗದಲ್ಲಿ ಪ್ರವಾದಿ ಚಿಕಿತ್ಸಾ ಪ್ರಸಕ್ತಿಯ ಮಹತ್ವತೆ ಕುರಿತು ಅರಿಯಬೇಕಾಗಿದ್ದು ಅದನ್ನು ಅನುಸರಿಸಿ ನಡೆದರೆ ಉತ್ತಮ ಆರೋಗ್ಯವನ್ನ ಪಡೆಯುದರಲ್ಲಿ ಸಂದೇಹವಿಲ್ಲ ಎಂದವರು ಹೇಳಿದರು.

Also Read  ಕಡಬದಲ್ಲಿ ಶುಭಾರಂಭಗೊಂಡ ನಿಪ್ಪೋನ್ ಪೈಂಟ್ಸ್ ನ ಅಧಿಕೃತ ವಿತರಕ ಸಂಸ್ಥೆ ಪೈಂಟ್ಸ್ ಹಾಗೂ ಪೈಂಟಿಂಗ್ ಸಾಮಾಗ್ರಿಗಳ ಮಳಿಗೆ

ಸಾಧಕರಿಗೆ , ಹಿರಿಯರಿಗೆ ಸನ್ಮಾನ :

ತ್ವಬೀಬ್ ಪದವೀಧರರಾದ ತ್ವಬೀಬ್ ಹಸನ್ ಅರ್ಶದಿ ಬೆಳ್ಳಾರೆ , ತ್ವಬೀಬ್ ಶಾಫಿ ಇರ್ಫಾನಿ ಫೈಝಿ ಯವರಿಗೆ ಸನ್ಮಾನಿಸಲಾಯಿತು. ಮಾನವ ಹಕ್ಕು ಹೋರಾಟಗಾರ ಹನೀಫ್ ಸಾಹೇಬ್ ಪಾಜಪಳ್ಳ ,ದ.ಕ ಜಿಲ್ಲಾ ಜಂಇಯ್ಯತುಲ್ ಉಲಮಾ ಕಾರ್ಯ ದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ,ಹಿರಿಯರಾದ ಅಬ್ಬುಮುಕ್ರಿ , ಪುತ್ತಬ ಮುಕ್ರಿ , ಹಸೈನಾರ್ ಹಾಜಿ , ಸಾಬೂ ಹಾಜಿ , ಕಳೆದ ಸಾಲಿನ ಮದರಸ ವಾರ್ಷಿಕ ಪಬ್ಲಿಕ್ ಪರೀಕ್ಷೆ ಯಲ್ಲಿ ರೇಂಜ್ ಮಟ್ಟದಲ್ಲಿ ದ್ವಿತೀಯ ಸ್ಥಾನಿಯಾದ ಆಯಿಷತ್ ನಾಝ್ , ಡಿಸ್ಟಿಂಕ್ಷನ್ ಪಡೆದ ಫಾತಿಮತ್ ಶಬೀಬಾ ಇವರಿಗೆ ಸಮ್ಮಾನಿಸಲಾಯಿತು.

ಹಾಜಿ ಪಿ ಇಸಾಕ್ ಸಾಹೇಬ್ ಪಾಜಪಳ್ಳ , ಹಾಜಿ ಮಹಮ್ಮದ್ ಇಂಜೀನಿಯರ್ , ಹಾಜಿ ಅಬ್ದುಲ್ ಖಾದರ್ ಬಯಂಬಾಡಿ ,ಉದ್ಯಮಿ ಇಬ್ರಾಹೀಂ ಹಾಜಿ ಕತ್ತಾರ್ , ಬೆಳ್ಳಾರೆ ಗ್ರಾ.ಪಂ ಉಪಾಧ್ಯಕ್ಷ ಮುಸ್ತಫಾ ಬೆಳ್ಳಾರೆ , ಬೆಳ್ಳಾರೆ ಗ್ರಾ.ಪಂ ಸದಸ್ಯ ಆರೀಫ್ ಬೆಳ್ಳಾರೆ , ಇಬ್ರಾಹೀಂ ಅಂಬಟಗದ್ದೆ , ಹಂಝ ಮುಸ್ಲಿಯಾರ್ , ಸಿಟಿ ಬಝಾರ್ ಪುತ್ತುಂಞ ಹಾಜಿ , ಶೂಬಿಝ್ ಅಬೂಬಕ್ಕರ್ ಹಾಜಿ , ಹುಸೈನ್ ಸಾಹೇಬ್ , ಹಸೈನಾರ್ ಪೆರುವಾಜೆ ಮುಖ್ಯ ಅತಿಥಿಗಳಾಗಿದ್ದರು ಹಾಗೂ ನೂರಾರು ಸಮಸ್ತ ಕಾರ್ಯ ಕರ್ತರು ಭಾಗವಹಿಸಿದ್ದರು .ಟ್ರಸ್ಟ್ ನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸ್ವಾಗತಿಸಿ, ಯು ಪಿ ಬಶೀರ್ ವಂದಿಸಿದರು. ಕೆ.ಎಸ್. ಜಮಾಲುದ್ದೀನ್ ಕಾರ್ಯಕ್ರಮ ನಿರೂಪಿಸಿದರು.

Also Read  ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ನಲುಗಿ ಹೋಗಿದೆ-ಮಲೆನಾಡು

error: Content is protected !!
Scroll to Top