ಕಡಬ: ಭವಿಷ್ಯ ನುಡಿಯುವ ನೆಪದಲ್ಲಿ ಮಗುವನ್ನು ಅಪಹರಿಸಿದ ವದಂತಿ ➤ ವಿಚಾರಣೆ ನಡೆಸಿದಾಗ ಬೆಚ್ಚಿಬಿದ್ದ ಸಾರ್ವಜನಿಕರು ➤ ಕೆಲಕಾಲ ಆತಂಕ ಸೃಷ್ಟಿ

(ನ್ಯೂಸ್ ಕಡಬ) newskadaba.com ಕಡಬ, ಅ.11. ಭವಿಷ್ಯ ನುಡಿಯುವ ಖಾವಿಧಾರಿ ಸನ್ಯಾಸಿಗಳಿಬ್ಬರು ಪಂಜದಿಂದ ಮಗುವೊಂದನ್ನು ಅಪಹರಿಸಿ ಸರಕಾರಿ ಬಸ್ಸಿನಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂಬ ವದಂತಿಯಿಂದ ಕೆಲಕಾಲ ಆತಂಕ ಸೃಷ್ಠಿಯಾದ ಘಟನೆ ಆಲಂಕಾರಿನಲ್ಲಿ ಶುಕ್ರವಾರದಂದು ಸಂಭವಿಸಿದೆ.

ಇಬ್ಬರು ವ್ಯಕ್ತಿಗಳು ಭವಿಷ್ಯ ಹೇಳುವ ನೆಪದಲ್ಲಿ ಪಂಜ ಪೇಟೆಯಿಂದ ಮಗುವನ್ನು ಅಪಹರಿಸಿ ಸರಕಾರಿ ಬಸ್ಸಿನ ಮೂಲಕ ಕಡಬಕ್ಕೆ ಬಂದು ಉಪ್ಪಿನಂಗಡಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಶುಕ್ರವಾರ ಅಪರಾಹ್ನ ಕಡಬದ ಜನತೆಗೆ ಲಭ್ಯವಾಗಿದ್ದು, ಹುಡುಕಾಡಿದಾಗ ಕಡಬದಲ್ಲಿ ವಿಚಾರಿಸಲಾಗಿ ಬಸ್ ಕಡಬದಿಂದ ಉಪ್ಪಿನಂಗಡಿ ಕಡೆಗೆ ಪ್ರಯಾಣ ಬೆಳೆಸಿದೆ ಎಂಬ ಮಾಹಿತಿ ಲಭ್ಯವಾಯಿತು. ತಕ್ಷಣ ಆಲಂಕಾರಿನ ಯುವಕರಿಗೆ ವಿಷಯ ತಿಳಿಸಿ ಬಸ್ಸನ್ನು ತಡೆದು ತನಿಖೆ ನಡೆಸುವಂತೆ ಸೂಚಿಸಲಾಯಿತು. ಇದೇ ವೇಳೆ ಆಗಮಿಸಿದ ಬಸ್ಸಿಗೆ ಮುತ್ತಿಕ್ಕಿದ ಯುವಕರು ಬಸ್ಸಿನಲ್ಲಿ ಎಲ್ಲಾ ಸೀಟುಗಳ ಪ್ರಯಾಣಿಕರನ್ನು ಜಾಲಾಡಿದರು. ಈ ವೇಳೆ ಭವಿಷ್ಯ ನುಡಿಯುವ ಖಾವಿಧಾರಿ ಸನ್ಯಾಸಿಗಳಿಬ್ಬರು ಬಸ್ಸಿನಲ್ಲಿರುವುದು ಗಮನಕ್ಕೆ ಬಂದು ಆ ಇಬ್ಬರನ್ನು ಕೆಳಗಿಳಿಸಿದರು.

Also Read  ಮಂಗಳೂರು: ಗಾಂಜಾ ಮಾರಾಟಕ್ಕೆ ಯತ್ನ ➤ ನಾಲ್ವರು ಆರೋಪಿಗಳ ಬಂಧನ

ಈ ಸಂದರ್ಭದಲ್ಲಿ ಕಡಬ ಠಾಣೆಯ ಹೋಮ್‍ಗಾರ್ಡ್ ಸಿಬ್ಬಂದಿ ಚೇತನ್ ಸ್ಥಳಕ್ಕಾಗಮಿಸಿ ವಿಚಾರಿಸಿದರು. ವಿಚಾರಣೆಯ ವೇಳೆ ನಾವು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಬಕಪ್ಪನಕೊಪ್ಪಲು ಸುಡುಗಾಡು ಸತೀಶ್(32) ಹಾಗೂ ಪ್ರದೀಪ್(27) ಎಂದು ಪರಿಚಯಿಸಿಕೊಂಡಿದ್ದು, ನಾವು ಬೆಳಿಗ್ಗೆ ಬೆಳ್ಳಾರೆಯಿಂದ ಕಡಬ ತನಕ ಮನೆ ಮನೆಗೆ ತೆರಳಿ ಭವಿಷ್ಯ ಹೇಳಲು ತೆರಳಿದ್ದೇವೆ. ಮಧ್ಯಾಹ್ನ ಕಡಬ ಪೇಟೆಯಿಂದ ಉಪ್ಪಿನಂಗಡಿಗೆ ತೆರಳಲು ಪ್ರಯಾಣ ಬೆಳೆಸಿದ್ದೇವೆ ಎಂಬ ಮಾಹಿತಿ ನೀಡಿದರು. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ವಿಚಾರಿಸಿದಾಗ ಮಗು ಅಪಹರಣವಾದ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಇದೊಂದು ಸುಳ್ಳು ವದಂತಿ ಎಂದು ತಿಳಿದು ಸನ್ಯಾಸಿಗಳಿಗೆ ಪ್ರಯಾಣ ಮುಂದುವರಿಸಲು ಸೂಚಿಸಲಾಯಿತು.

ಬಳಿಕ ಬಂದ ಮಾಹಿತಿಯಂತೆ ಇವರಿಬ್ಬರು ಕಳ್ಳರಾಗಿದ್ದು ಬೆಳ್ಳಾರೆ ಸಮೀಪ ಮನೆಯೊಂದರಿಂದ ಬೆಳೆ ಬಾಳುವ ಮೊಬೈಲ್, ಬಂಗಾರ ಹಾಗೂ ಹಣವನ್ನು ಕಳವುಗೈದು ಪರಾರಿಯಾಗುತ್ತಿದ್ದು, ಇವರ ತಂಡದ ಓರ್ವನನ್ನು ಸಂಪ್ಯದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಆಲಂಕಾರಿನಲ್ಲಿ ಇಬ್ಬರನ್ನು ಸಾರ್ವಜನಿಕರು ವಶಕ್ಕೆ ಪಡೆದುಕೊಂಡು ನಿಲ್ಲಿಸಿದ್ದಾರೆ ಎಂಬ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಸಂಪ್ಯ ಠಾಣೆಯ ಸಿಬ್ಬಂದಿಗಳು ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿ ಒರ್ವನನ್ನು ಈಗಾಗಲೇ ವಶಪಡೆದುಕೊಂಡಿದ್ದೇವೆ ಎಂದು ತಿಳಿಸಿದರು. ಅಲ್ಲದೆ ಆರೋಪಿಗಳ ಪೋಟೋವನ್ನು ಪರಿಶೀಲಿಸಿ ಬೆಳ್ಳಾರೆಯಲ್ಲಿ ಕಳ್ಳತನಗೈದ ಕಳ್ಳರಲ್ಲಿ ಒಬ್ಬನು ಈ ತಂಡದಲ್ಲಿದ್ದಾನೆ ಎಂದು ಸ್ಪಷ್ಟಪಡಿಸಿದರು. ತಕ್ಷಣ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಗಳನ್ನು ಉಪ್ಪಿನಂಗಡಿ ಬಸ್ ತಂಗುದಾಣದಲ್ಲಿ ಬಂಧಿಸಲಾಗಿದೆ.

Also Read  ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ ಇಂದಿನಿಂದ ಆರಂಭ

error: Content is protected !!
Scroll to Top