ವ್ಯಕ್ತಿ ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.11.ಯುವಕ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಮ್ಮರ್ ಫಾರೂಕ್ (24) ಎಂಬ ಯುವಕ ಮಂಗಳೂರು ತಾಲೂಕು, ಹರೇಕಳ ಗ್ರಾಮದಲ್ಲಿರುವ ಮನೆಯಿಂದ ಕಾಣೆಯಾಗಿದ್ದಾರೆ. ಕಾಣೆಯಾದ ವ್ಯಕ್ತಿಯ ಎತ್ತರ 5 ಅಡಿ 6 ಇಂಚು, ಕೋಲು ಮುಖ, ಸಪೂರ ಶರೀರ, ಎಣ್ಣೆಗಪ್ಪು ಮೈಬಣ್ಣ, ಕುರುಚಲು ಗಡ್ಡ, ಧರಿಸಿದ ಬಟ್ಟೆ ಬಿಳಿ ಬಣ್ಣದ ತುಂಬು ತೋಳಿನ ಅಂಗಿ, ಖಾಕಿ ಬಣ್ಣದ ಕಾಟನ್ ಪ್ಯಾಂಟ್, ಮಾತಾನಾಡುವ ಭಾಷೆ- ತುಳು, ಕನ್ನಡ, ಬ್ಯಾರಿ.
ಕಾಣೆಯಾದ ಯುವಕನ ಬಗ್ಗೆ ಮಾಹಿತಿ ದೊರಕ್ಕಿದ್ದಲ್ಲಿ ಪೊಲೀಸ್ ನಿರೀಕ್ಷರು, ಕೊಣಾಜೆ ಪೊಲೀಸ್ ಠಾಣೆ, ಮಂಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರೇಮಿಗಳು ಆತ್ಮಹತ್ಯೆಗೆ ಶರಣು

error: Content is protected !!
Scroll to Top