ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್, ಎಸ್ಕೆಎಸ್ಸೆಸ್ಸೆಫ್ ಬೆಳ್ಳಾರೆ ➤ ನಾಳೆ (ಅ.12) ಆರೋಗ್ಯ ಮಾಹಿತಿ ಶಿಬಿರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಅ.11. ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಮತ್ತು ಎಸ್.ಕೆ.ಎಸ್.ಎಸ್.ಎಫ್ ಬೆಳ್ಳಾರೆ ಇದರ ವತಿಯಿಂದ ಆರೋಗ್ಯ ಮಾಹಿತಿ ಶಿಬಿರ ಮತ್ತು ಸಾಧಕರಿಗೆ, ಹಿರಿಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರವು ಅಕ್ಟೋಬರ್ 12 ರಂದು ಬೆಳ್ಳಾರೆಯ ರಾಜೀವ್ ಗಾಂಧಿ ಸಭಾಂಗಣದಲ್ಲಿ ನಡೆಯಲಿರುವುದು.

ನಜ್ಮುದ್ದೀನ್ ಪೂಕೋಯ ತಂಙಳ್ ಅಲ್ ಹೈದ್ರೋಸಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ದುವಾಗೆ ನೇತೃತ್ವವನ್ನು ನೀಡಲಿದ್ದಾರೆ. ಶಂಸುಲ್ ಉಲಮಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಯು.ಹೆಚ್. ಅಬೂಬಕ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಝಕರಿಯಾ ಜುಮಾ ಮಸೀದಿಯ ಮಾಜಿ ಖತೀಬರಾದ ತ್ವಬೀಬ್ ಶಾಫಿ ಇರ್ಫಾನಿ ಫೈಝಿ ಇವರು ಆಧುನಿಕ ಯುಗದಲ್ಲಿ ಪ್ರವಾದಿ ಚಿಕಿತ್ಸಾ ಪ್ರಸಕ್ತಿ ವಿಷಯದ ಕುರಿತು ವಿಷಯ ಮಂಡಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Also Read  ಕಡಬ ತಹಶೀಲ್ದಾರ್ ರಮೇಶ್ ಬಾಬು ಗುಂಡ್ಲುಪೇಟೆಗೆ ವರ್ಗಾವಣೆ

error: Content is protected !!
Scroll to Top