ಸಚಿವ ಡಿಕೆಶಿ ನಿವಾಸದ ಐಟಿ ದಾಳಿಗೆ ಶುರುವಾಯಿತಾ ಕಾಂಗ್ರೆಸ್ ಆಟ…? ► ಯಡಿಯೂರಪ್ಪ ವಿರುದ್ಧ ಎಫ್ಐಆರ್, ಯಾವುದೇ ಕ್ಷಣ ಬಂಧನ ಸಾಧ್ಯತೆ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.19. ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದ ನಂತರ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿ ಸಿದ್ದರಾಮಯ್ಯ ಸರಕಾರವನ್ನು ಅತ್ಯಂತ ಭ್ರಷ್ಟ ಸರಕಾರ ಎಂದು ಬಣ್ಣಸಿ ರಾಜ್ಯ ಬಿಜೆಪಿಗೆ ಹುರುಪನ್ನು ಲೇಪಿಸಿ ತೆರಳಿದ್ದಾಯ್ತು… ಇದರ ಜೊತೆಗೆ ಬಿಜೆಪಿ ಪಕ್ಷದ ವತಿಯಿಂದ ರಾಜ್ಯ ರಾಜಧಾನಿಯಲ್ಲಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಮಾಡಿದ್ದೂ ಆಯ್ತು… ಇದಕ್ಕೆಲ್ಲ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಸಜ್ಜಾಗಿದ್ದು ಏಳು ವರ್ಷಗಳ ಹಿಂದಿನ ಪ್ರಕರಣಕ್ಕೆ ಈಗ ಮರುಜೀವ ಸಿಕ್ಕಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಎರಡು ಎಫ್ಐಆರ್’ಗಳು ದಾಖಲಾಗಿವೆ. ಡಾ. ಡಿ. ಅಯ್ಯಪ್ಪ ದುರೈ ಎಂಬ ಸಾಮಾಜಿಕ ಹೋರಾಟಗಾರರೊಬ್ಬರು ಬಿಎಸ್’ವೈ ವಿರುದ್ಧ ಅಕ್ರಮ ಡೀನೋಟಿಫಿಕೇಶ್ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ಅವರು ಎಫ್’ಐಆರ್ ದಾಖಲಿಸಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ, ಹೇಸರಘಟ್ಟ-ಯಲಹಂಕ ವ್ಯಾಪ್ತಿಯ 17 ಗ್ರಾಮಗಳಲ್ಲಿ ಒಟ್ಟು 3546 ಎಕರೆ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಸುಮಾರು 19 ಸಾವಿರ ನಿವೇಶನಗಳ ಬೃಹತ್ ಶಿವರಾಮ್ ಕಾರಂತ್ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನವಾಗಿತ್ತು. ಇದರಲ್ಲಿ ಯಡಿಯೂರಪ್ಪನವರು ಸುಮಾರು 257 ಎಕರೆ ಜಮೀನನ್ನು ಡೀನೋಟಿಫೈ ಮಾಡಿಸಿದ್ದರೆನ್ನಲಾಗಿದೆ. ಆದರೆ, ಈ ವಿಚಾರದಲ್ಲಿ ಸುಮಾರು 250 ಎಕರೆಯಷ್ಟು ಜಮೀನಿನ ಡೀನೋಟಿಫಿಕೇಶನ್’ನಲ್ಲಿ ಸರಿಯಾದ ನಿಯಮಗಳನ್ನು ಪಾಲಿಸಲಾಗಿಲ್ಲ. ಅಕ್ರಮವಾಗಿ ಡೀನೋಟಿಫಿಕೇಶನ್ ಮಾಡಲಾಗಿದೆ ಎಂದು ಅಯ್ಯಪ್ಪ ದುರೈ ಆರೋಪಿಸಿ ದೂರು ನೀಡಲಾಗಿದೆ.

error: Content is protected !!
Scroll to Top