ಹರೀಶ್ ಶೇರಿಗಾರ್ ಅವರ English” ತುಳು ಚಿತ್ರದ ಹಾಡಿನ ಧ್ವನಿ ಸುರುಳಿ ಬಿಡುಗಡೆಗೊಳಿಸಿದ ಮೇರು ನಟ ಅನಂತ್‌ನಾಗ್‌  

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.10.ಹರೀಶ್ ಶೇರಿಗಾರ್ ಅವರ English” ತುಳು ಚಿತ್ರದ ಹಾಡಿನ ಧ್ವನಿ ಸುರುಳಿಯನ್ನು ಮೇರು ನಟ ಅನಂತ್‌ನಾಗ್‌  ಬಿಡುಗಡೆಗೊಳಿಸಿದರು.

ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ದುಬೈಯ ಖ್ಯಾತ ಉದ್ಯಮಿ, ಮಾರ್ಚ್ – 22, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಯಾನ ಮೊದಲಾದ ಕನ್ನಡ ಸಿನಿಮಾಗಳನ್ನು ನಿರ್ಮಿಸಿರುವ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ಅವರು ಮೊದಲ ಬಾರಿಗೆ ತುಳುವಿನಲ್ಲಿ ನಿರ್ಮಿಸುತ್ತಿರುವ ಎಕ್ಕಸಕ ಹಾಗೂ ಪಿಲಿಬೈಲ್ ಯಮುನಕ್ಕ ಖ್ಯಾತಿಯ ಸೂರಜ್ ಶೆಟ್ಟಿ ನಿರ್ದೇಶನದ “ಇಂಗ್ಲೀಷ್” ಸಿನಿಮಾದ ಹಾಡಿನ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಅಕ್ಟೋಬರ್ 8 ಮಂಗಳವಾರದಂದು ಸಂಜೆ ಮಂಗಳೂರಿನಲ್ಲಿ ನಡೆಯಿತು.ನಗರದ ಲಾಲ್‌ಭಾಗ್ ಬಸ್ ನಿಲ್ಧಾಣದ ಬಳಿ (ಪಬ್ಬಸ್ ಸಮೀಪ) ಮಂಗಳವಾರ ಸಂಜೆ ಎಸ್.ಕೆ ಮುನ್ಸಿಪಾಲ್ ಆಯೋಜಿಸಿರುವ ಭವ್ಯ ದಸರಾ ಮಹೋತ್ಸವ – ಸಂಗೀತಾ ರಸಸಂಜೆ ಕಾರ್ಯಕ್ರಮದಲ್ಲಿ “English” ಚಿತ್ರದ ಮೂಲಕ ತುಳು ಚಿತ್ರವೊಂದರಲ್ಲಿ ಪ್ರಥಮ ಬಾರಿಗೆ ಅಭಿನಯಿಸುತ್ತಿರುವ ಹಿರಿಯ ನಟ ಅನಂತನಾಗ್ ಅವರು English” ತುಳು ಚಿತ್ರದ ಅಡಿಯೋ ಸಿಡಿ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭಾಕೋರಿದರು.

Also Read  ತನ್ನ ಕಾರ್ಮಿಕರನ್ನ ವಿಮಾನದಲ್ಲಿ ಕಳುಹಿಸಿದ ರೈತ ➤ ದೆಹಲಿಯಿಂದ ತಾಯ್ನಾಡಿಗೆ ಮರಳಿದ ಕಾರ್ಮಿಕರು

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮಾತ್, ಮಾಜಿ ಸಚಿವ ಬಿ.ರಮಾನಾಥ್ ರೈ, ಮಾಜಿ ಮೇಯರ್ ಎಂ. ಶಶಿಧರ್ ಹೆಗ್ಡೆ, ಪಾಲಿಕೆಯ ಮಾಜಿ ಸದಸ್ಯರಾದ ಅಶೋಕ್ ಡಿ.ಕೆ, ರೂಪಾ.ಡಿ.ಬಂಗೇರ, ಶ್ರೀಮತಿ ಗಾಯತ್ರಿ ಅನಂತ್ ನಾಗ್, ಕರ್ನಾಟಕ ದೇವಾಡಿಗ ಸಂಘದ ಅಧ್ಯಕ್ಷ ಡಾ.ದೇವರಾಜ್, , ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಿಷಭ್ ಶೆಟ್ಟಿ, ನವೀನ್ ಡಿ. ಪಡೀಲ್ ಮುಖ್ಯ ಅಥಿತಿಗಳಾಗಿದ್ದರು. ಚಿತ್ರದ ನಿರ್ಮಾಪರಾದ ಶ್ರೀ ಹರೀಶ್ ಶೇರಿಗಾರ್, ಶ್ರೀಮತಿ ಶರ್ಮಿಳಾ ಶೇರಿಗಾರ್, ನಿರ್ದೇಶಕ ಸೂರಾಜ್ ಶೆಟ್ಟಿ, ಸಂಗೀತಾ ನಿರ್ದೇಶಕ ಮಣಿಕಾಂತ್ ಕದ್ರಿ, ಚಿತ್ರದ ನಾಯಕ ನಟ ಪೃಥ್ವಿ ಅಂಬರ್, ನಾಯಕಿ ನಟಿ ನವ್ಯಾ ಪೂಜಾರಿ, ಪ್ರಮುಖರಾದ ಪ್ರಕಾಶ್ ಶೇರಿಗಾರ್, ಶ್ರೀನಿವಾಸ್ ಶೇರಿಗಾರ್, ಸುನೀಲ್ ದತ್ತ್ ಪೈ, ಎಸ್.ಕೆ ಮುನ್ಸಿಪಾಲ್‌ನ ಶಿವರಾಜ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗೌರವ ಸಮ್ಮಾನ : ಅನಂತ್ ನಾಗ್, ಹರೀಶ್ ಶೇರಿಗಾರ್ ಜುಗಲ್‌ಬಂದಿ

Also Read  ಕಡಬ: ದಿವಂಗತ ಜಯರಾಮ ಅರ್ತಿಲ ಅವರಿಗೆ ನುಡಿನಮನ


ಕಾರ್ಯಕ್ರಮದಲ್ಲಿ ಅನಂತ್ ನಾಗ್ ಹಾಗೂ ಶ್ರೀಮತಿ ಗಾಯತ್ರಿ ಅನಂತ್ ನಾಗ್ ದಂಪತಿಗಳನ್ನು ಎಸ್.ಕೆ ಮುನ್ಸಿಪಾಲ್‌ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅನಂತ್ ನಾಗ್ ಅವರು ಇದು ಎಂತಾ ಲೋಕವಯ್ಯ…  ಹಾಗೂ ಹರೀಶ್ ಶೇರಿಗಾರ್ ಅವರು ಎಲ್ಲಿರುವೆ ಮನವ ಕಾಡುವ ರೂಪಸಿಯೇ… ಹಾಡನ್ನು ಹಾಡುವ ಮೂಲಕ ನೆರೆದ ಪ್ರೇಕ್ಷಕರನ್ನು ರಂಜಿಸಿದರು.  ಆರ್.ಜೆ ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top