ಕುಕ್ಕೇ ಕ್ಷೇತ್ರಕ್ಕೆ ತಲುಪಿದ ನೂತನ ಬ್ರಹ್ಮರಥ ➤ ಕ್ಷೇತ್ರದ ಆನೆ ‘ಯಶಸ್ವಿ’ಯಿಂದ ಅದ್ದೂರಿ ಸ್ವಾಗತ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.02. ಸುಮಾರು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಬ್ರಹ್ಮರಥವು ಬುಧವಾರ ಸಂಜೆ 8 ಗಂಟೆಯ ವೇಳೆಗೆ ಯಶಸ್ವಿಯಾಗಿ ಕ್ಷೇತ್ರಕ್ಕೆ ತಲುಪಿತು.

ಉಡುಪಿಯ ಕೋಟೇಶ್ವರದಿಂದ ಸೋಮವಾರದಂದು ಹೊರಟ ನೂತನ ಬ್ರಹ್ಮರಥವು ಮಂಗಳವಾರ ರಾತ್ರಿ ಕಡಬ ತಾಲೂಕಿನ ಬಲ್ಯಕ್ಕೆ ಆಗಮಿಸಿದ್ದು, ಬುಧವಾರದಂದು ಬೆಳಿಗ್ಗೆ ಕಡಬದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಬಲ್ಯದಿಂದ ಸುಬ್ರಹ್ಮಣ್ಯದ ವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಕಳಾರ ಹಾಗೂ ಮರ್ಧಾಳದಲ್ಲಿ ಮುಸ್ಲಿಂ ಬಾಂಧವರು ಬ್ರಹ್ಮರಥ ಆಗಮಿಸಿದ ವೇಳೆ ಸಿಹಿತಿಂಡಿ ಹಂಚಿ ಭಾವೈಕ್ಯತೆ ಮೆರೆದರು. ಸಾಯಂಕಾಲ ಕುಮಾರಧಾರ ತಲುಪಿದ ಬ್ರಹ್ಮರಥಕ್ಕೆ ಕ್ಷೇತ್ರದ ಆನೆ ‘ಯಶಸ್ವಿ’ ಸ್ವಾಗತ ಕೋರುವ ಮೂಲಕ ಕ್ಷೇತ್ರಕ್ಕೆ ಬರಮಾಡಿಕೊಂಡಿತು. ಎಂಟು ಗಂಟೆಯ ವೇಳೆಗೆ ಯಶಸ್ವಿಯಾಗಿ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಲುಪಿತು.

error: Content is protected !!

Join the Group

Join WhatsApp Group