ಗುತ್ತಿಗೆ ಆಧಾರದಲ್ಲಿ ವೆನ್‍ಲಾಕ್‍ನಲ್ಲಿ ವಿವಿಧ ಹುದ್ದೆಗೆ ನೇರ ಸಂದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.25.ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಇಲ್ಲಿ ಡಿಎನ್‍ಬಿ ಕೋರ್ಸ್‍ಗಳು ಆರಂಭವಾಗಲಿದ್ದು, ಪಿ.ಜಿ ಟೀಚರ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಕೊಳ್ಳಲು ನೇರ ಸಂದರ್ಶನ ನಡೆಸಲಾಗುವುದು.ಆಸಕ್ತ ತಜ್ಞರು ವೈದ್ಯರುಗಳು ಸಂಬಂಧಿಸಿದ ಅಗತ್ಯ ದಾಖಲಾತಿಗಳೊಂದಿಗೆ ಅಕ್ಟೋಬರ್ 10 ರಂದು ಬೆಳಿಗ್ಗೆ 11 ಗಂಟೆಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.

ಖಾಲಿ ಇರುವ ಹುದ್ದೆಗಳ ವಿವರ : ಪೀಡಿಯಾಟ್ರಿಕ್ ಸರ್ಜರಿ, ಯುರೋಲೊಜಿ, ಇಮ್ಯುನೋ ಹೆಮಿಟೋಲೊಜಿ ಮತ್ತು ಟ್ರಾನ್ಸ್‍ಫ್ಯುóಷನ್ ಈ ಎಲ್ಲಾ ವಿಭಾಗದಲ್ಲಿ ತಲಾ ಒಂದು ಹುದ್ದೆ ಖಾಲಿ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರ ಕಚೇರಿ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು. ದೂರವಾಣಿ ಸಂಖ್ಯೆ 0824-24313250, 2421351 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಕುಸಿತಗೊಂಡ ಕೊಂತೂರು ಸರಕಾರಿ ಶಾಲೆಗೆ ಎಸ್‌ಡಿಎಂಸಿ ಜಿಲ್ಲಾ ಸಮನ್ವಯ ವೇದಿಕೆಯ ನಿಯೋಗ ಭೇಟಿ

error: Content is protected !!
Scroll to Top