ನೀರಿನ ಬಾಕಿ ಬಿಲ್ಲು ಪಾವತಿಸಲು ಪಾಲಿಕೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.25.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ನೀರಿನ ಬಳಕೆದಾರರು ತಾವು ಉಪಯೋಗಿಸಿದ ನೀರಿನ ಬಾಬ್ತು ಬಿಲ್ಲನ್ನು ಪಾವತಿಸದೇ, ಅನೇಕ ಪ್ರಕರಣಗಳಲ್ಲಿ ರೂ. 25,000/- ಕ್ಕಿಂತಲೂ ಹೆಚ್ಚು ಮೊತ್ತದ ಬಿಲ್ ಬಾಕಿ ಉಳಿಸಿಕೊಂಡಿರುವುದು ಕಂಡು ಬಂದಿರುತ್ತದೆ. ಇದರಿಂದ ಮಹಾನಗರಪಾಲಿಕೆಯ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ಅಡಚಣೆಯಾಗುತ್ತಿದೆ.


ಈ ಹಿನ್ನೆಲೆಯಲ್ಲಿ ಈ ಪತ್ರಿಕಾ ಪ್ರಕಟಣೆಯನ್ನೇ 7 ದಿನದ ನೋಟೀಸ್ ಎಂದು ಪರಿಗಣಿಸಿ ಬಾಕಿ ಇರುವ ಬಿಲ್‍ಗಳನ್ನು ಕೂಡಲೇ ಪಾವತಿಸಬೇಕು. ನೀರಿನ ಶುಲ್ಕ ವಸೂಲಾತಿಗೆ ಈಗಾಗಲೇ ಇಂಜಿನಿಯರ್‍ಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು ಅಗತ್ಯ ಸಂದರ್ಭದಲ್ಲಿ ನೀರಿನ ಜೋಡಣೆಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆಗೆ ನೀಡಿ ಸಹಕರಿಸಬೇಕು. ಯಾವುದೇ ದಾಖಲಾತಿ ಇಲ್ಲದೆ ನೀರಿನ ಜೋಡಣೆಯನ್ನು ಪಡೆದುಕೊಂಡ ಸಾರ್ವಜನಿಕರು 7 ದಿನಗಳ ಒಳಗೆ ಅಗತ್ಯ ದಾಖಲೆಗಳನ್ನು ನೀಡಿ ಜೋಡಣೆಯನ್ನು ಸಕ್ರಮಗೊಳಿಸುವಂತೆ ಸೂಚನೆ ನೀಡಲಾಗಿದೆ. ಈ ಪ್ರಕಟಣೆಯ ಹೊರತಾಗಿಯು ಅನಧಿಕೃತ ಜೋಡಣೆಗಳನ್ನು ಸಕ್ರಮಗೊಳಿಸದೇ ಇದ್ದರೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

Gems

error: Content is protected !!
Scroll to Top