ಇಂದು ಸಂಜೆ ಕಡಬದಲ್ಲಿ ‘ಆರಿತು ಕಾಶ್ಮೀರದ ಬೆಂಕಿ’ ಬಹಿರಂಗ ಸಮಾವೇಶ ➤ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯಿಂದ ದಿಕ್ಸೂಚಿ ಭಾಷಣ

(ನ್ಯೂಸ್ ಕಡಬ) newskadaba.com ಕಡಬ, ಸೆ.24. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೆಷ ಸ್ಥಾನಮಾನ 370 ನ್ನು ವಜಾಗೊಳಿಸಿ ಸಮಾನ ಸ್ಥಾನಮಾನ ಒದಗಿಸಿರುವ ಕೇಂದ್ರ ಸರಕಾರದ ನಡೆ, ಅದರ ಹಿನ್ನೆಲೆ, ಮುಂದಿನ ಆಗುಹೋಗುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಇರುವ ಅನುಮಾನ, ಸಂಶಯಗಳ ಬಗ್ಗೆ ಸ್ಪಷ್ಟತೆಯನ್ನು ನೀಡಲು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಇಂದು ಸಂಜೆ ಕಡಬಕ್ಕೆ ಆಗಮಿಸಲಿದ್ದಾರೆ.

ಯುವಾ ಬ್ರಿಗೇಡ್ ಕಡಬದ ವತಿಯಿಂದ ಇಂದು (ಸೆ.24) ಸಂಜೆ 05 ಗಂಟೆಗೆ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಿರುವ ‘ಆರಿತು ಕಾಶ್ಮೀರದ ಬೆಂಕಿ’ ಬಹಿರಂಗ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಡಿ‌.ಆರ್. ರಾಧಾಕೃಷ್ಣ ಕುಳ ಉಪಸ್ಥಿತರಿರುವರು ಎಂದು ಕಾರ್ಯಕ್ರಮ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಒಂದೇ ದಿನ 6 ಜನರಿಗೆ ಮಂಗನ ಕಾಯಿಲೆ ದೃಢ- ಆರೋಗ್ಯ ಇಲಾಖೆ

error: Content is protected !!
Scroll to Top