(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.23. ಇತ್ತೀಚೆಗೆ ಕೆಂದ್ರ ಸರಕಾರವು ದೇಶದೆಲ್ಲೆಡೆ ಹಿಂದಿಯನ್ನು ದಬ್ಬಾಳಿಕೆಯ ಮೂಲಕ ಹೇರಲು ಪ್ರಯತ್ನ ಮಾಡಿದ್ದು, ಅದು ಕನ್ನಡ ನಾಡಿನಲ್ಲಿ ಸಾಧ್ಯವಿಲ್ಲದ ಮಾತಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ದಕ್ಷಿಣ ಕನ್ನಡ ವಕ್ತಾರ ಮೌಶೀರ್ ಅಹಮದ್ ಸಾಮಣಿಗೆ ಹೇಳಿದ್ದಾರೆ.
ಕನ್ನಡ ಭಾಷೆಯು ಕಲೆ ಮತ್ತು ಸಾಹಿತ್ಯ, ಸಂಸ್ಕ್ರತಿಯಿಂದ ಕೂಡಿದ್ದು, ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ನಮ್ಮ ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸದೊಂದಿಗೆ ಲಿಪಿ ಇದೆ. ಅಮೋಘವರ್ಷ ನೃಪತುಂಗ ರಾಜನ ಆಳ್ವಿಕೆಯಲ್ಲಿ ಕಾವೇರಿಯಿಂದ ಗೋದಾವರಿಯವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದು, ನಿಜವಾಗಿಯೂ ಕನ್ನಡಿಗರ ಹೆಮ್ಮೆಯಾಗಿದೆ. ದೇಶದ ಜನರ ಮೇಲೆ ಹಿಂದಿ ಹೇರಿಕೆ ಖಂಡನಿಯ ಮತ್ತು ಇದನ್ನು ಕನ್ನಡ ನಾಡು ಅಂದು ಇಂದು ಮುಂದು ಎಂದೆಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.