ಸಾ. ಶಿಕ್ಷಣ ಇಲಾಖೆ ಪುತ್ತೂರು ಇದರ ವತಿಯಿಂದ14 ವಯೋಮಾನದ ಬಾಲಕಿಯರ ವಾಲಿ ಬಾಲ್ ಪಂದ್ಯಾಟ ➤ ಜ್ಞಾನೋದಯ ಬೆಥನಿ ದ್ವಿತೀಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ,ಸಪ್ಟೆಂಬರ್.21.ಸಾರ್ವಜನಿಕ ಶಿಕ್ಷಣ ಇಲಾಖೆ ಪುತ್ತೂರು ಇದರ ವತಿಯಿಂದ ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲೆಯಲ್ಲಿ ನಡೆದ 14 ವಯೋಮಾನದ ಬಾಲಕಿಯರ ವಾಲಿ ಬಾಲ್ ಪಂದ್ಯಾಟ ಏರ್ಪಡಿಸಲಾಗಿತ್ತು.

Gems

ಈ ಸ್ಪರ್ಧೆಯಲ್ಲಿ  ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಜೆಸ್ಲಿ, ಅಸುರ, ಜಿಸ್ಮ , ಸಾನಿಕ, ಲಿಶ, ರೋಶ್ಲಿ, ಏಂಜಲ್, ಭಾವಿಕಾ ,ಅನ್ವಿತಾ , ರೋಶಿನಿ ಹಾಗೂ ಪಲ್ಲವಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾರೀರಿಕ ಶಿಕ್ಷಕರಾದ ಮನೋಜ್, ಸುದರ್ಶನ್ ಬಂಗೇರ ಮತ್ತು ಅಲ್ಫೋನ್ಸಾ ಮಾರ್ಗದರ್ಶನ ನೀಡಿರುತ್ತಾರೆ. ಸಂಸ್ಥೆಯ ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒಐಸಿ ಎಲ್ಲರನ್ನೂ ಆಭಿನಂದಿಸಿದರು.

Also Read  ದೀಪಕ್, ಬಶೀರ್ ನಿವಾಸಗಳಿಗೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

error: Content is protected !!
Scroll to Top