(ನ್ಯೂಸ್ ಕಡಬ) newskadaba.com ಮಂಗಳೂರು, ಆ.17. ದಕ್ಷಿಣ ಕನ್ನಡ ಜಿಲ್ಲೆಯ ಇಚಿಲಂಪಾಡಿ ಗ್ರಾಮದ ಕೆಲವು ತರುಣರು ಕಟ್ಟಿಕೊಂಡ ‘ನೀತಿ’ ತಂಡದ ವತಿಯಿಂದ ‘ಚೈನಾ ವಸ್ತುಗಳ ವಿರೋಧಿ ಅಭಿಯಾನ’ಕ್ಕೆ ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರದಂದು ಚಾಲನೆ ನೀಡಲಾಯಿತು.
ಮಂಗಳೂರು ಜಿಲ್ಲಾಧಿಕಾರಿಗಳ ಪರವಾಗಿ ಕಛೇರಿಯ ತಹಶೀಲ್ದಾರ್ ಮಾಣಿಕ್ಯರವರಿಗೆ ಗಿಡ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಮಂಗಳೂರು ಪೋಲಿಸ್ ಆಯುಕ್ತರ ಕಚೇರಿ, ಎಸ್.ಪಿ ಕಚೇರಿ, ಮಿನಿ ವಿಧಾನ ಸೌಧ, ಮಂಗಳೂರು ಮಾರುಕಟ್ಟೆ, ಮುಂತಾದ ಕಡೆಗೆ ಮೆರವಣಿಗೆ ಮೂಲಕ ಸಾಗಿ ಕರಪತ್ರಗಳನ್ನು ಹಂಚಿ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ನೀತಿ ತಂಡದ ರಾಜ್ಯಾಧ್ಯಕ್ಷರಾದ ಜಯನ್ ಟಿ, ಕಾರ್ಯದರ್ಶಿ ಜೈಸನ್ ಜಾರ್ಜ್, ಕೋಶಾಧಿಕಾರಿ ಸುಜಿತ್ ಸಿ. ಫಿಲಿಪ್, ಮಂಗಳೂರು ಪಿ.ಯು.ಸಿ.ಎಲ್ ಘಟಕದ ಪ್ರಧಾನ ಕಾರ್ಯದರ್ಶಿ ಅಗಸ್ಟೀನ್, ಗಾರ್ಡಿಯನ್ ಬಿಲ್ಡರ್ಸ್ನ ಕೇಶವ ಗೌಡ, ಪಶ್ಚಿಮ ಘಟ್ಟ ನದಿಮೂಲ ಸಂರಕ್ಷಣಾ ಘಟಕದ ಪ್ರಧಾನ ಕಾರ್ಯದರ್ಶಿ ಅಭಿಲಾಷ್, ದಕ್ಷಿಣ ಕನ್ನಡ ಜಿಲ್ಲೆಯ ನೀತಿ ತಂಡದ ವಿವಿಧ ವಲಯದ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.