ಏಷ್ಯಾದ ನಂ.1 ‘ನಿಪ್ಪೋನ್ ಪೈಂಟ್’ ಇದೀಗ ಕಡಬದಲ್ಲಿ ➤ ಅಧಿಕೃತ ವಿತರಕ ಸಂಸ್ಥೆ ಎಂ.ಎಚ್. ಟ್ರೇಡರ್ಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.19. ಇಲ್ಲಿನ ಕಡಬ – ಪಂಜ ರಸ್ತೆಯಲ್ಲಿನ ಮಧುರಾ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭಗೊಂಡಿರುವ ನಿಪ್ಪೋನ್ ಪೈಂಟ್ಸ್ ನ ಅಧಿಕೃತ ವಿತರಕ ಸಂಸ್ಥೆ ಪೈಂಟ್ಸ್ ಹಾಗೂ ಪೈಂಟಿಂಗ್ ಸಾಮಾಗ್ರಿಗಳ ಮಳಿಗೆ ಎಂ.ಎಚ್ ಟ್ರೇಡರ್ಸ್‍ನ ಉದ್ಘಾಟನಾ ಸಮಾರಂಭವು ಗುರುವಾರದಂದು ನಡೆಯಿತು.

ಸಂಸ್ಥೆಯನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಉದ್ಯಮ ವ್ಯವಹಾರಗಳು ಅಭಿವೃದ್ಧಿಗೆ ಮಹತ್ತರ ಕೊಡುಗೆಗಳನ್ನು ನೀಡುತ್ತಿವೆ. ಉತ್ತಮ ತಂತ್ರಜ್ಞಾನ, ಆಧುನಿಕ ವ್ಯವಸ್ಥೆಯೊಂದಿಗೆ ಉದ್ಯಮ ಸಂಸ್ಥೆಗಳು ಕಡಬ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲವಾಗುತ್ತಿವೆ. ಬೇರೆ ಊರಿಂದ ಬಂದು ಇಲ್ಲಿ ವ್ಯಾಪಾರ ವ್ಯವಹಾರ ನಡೆಸಿದವರನ್ನು ಕಡಬದ ಜನತೆ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಎಂ.ಎಚ್. ಟ್ರೇಡರ್ಸ್ ಕೂಡಾ ಜನರ ಬೇಕು ಬೇಡಗಳಿಗೆ ಸ್ಪಂದಿಸಿ ಉತ್ತಮ ಸಂಸ್ಥೆಯಾಗಿ ಮೂಡಿ ಬರಲಿ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಪಂಚಾಯಿತಿ ಸದಸ್ಯ ಫಝಲ್ ಕೋಡಿಂಬಾಳ ಮಾತನಾಡಿ ಯಾವುದೇ ವ್ಯವಹಾರದಲ್ಲಿ ಜನರ ನಿರೀಕ್ಷೆ ಉತ್ತಮ ಸೇವೆ ಹಾಗೂ ಪಾರದರ್ಶಕತೆಯಾಗಿರುತ್ತದೆ, ಇದಕ್ಕೆ ಪೂರಕವಾಗಿ ಎಂ.ಎಚ್. ಟ್ರೇಡರ್ಸ್ ಜನರ ವಿಶ್ವಾಸ ಗಳಿಸುವಲ್ಲಿ ಸಫಲವಾಗಬೇಕು, ಕಡಬ ಜನತೆಯ ಪ್ರೀತಿ ವಿಶ್ವಾಸಗಳಿಸಿ ಯಶಸ್ಸು ಪಡೆಯುಂತಾಗಲಿ ಎಂದರು. ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ ಸಂಚಾಲಕ ಫಾ|ಸಕರಿಯಾಸ್ ನಂದಿಯಾಟ್ ಒಐಸಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಉದ್ಯಮ ಶಿಲತೆ ಪ್ರುಖ ಪಾತ್ರವಹಿಸುತ್ತದೆ. ಆದ್ದರಿಂದ ಉದ್ಯಮಿಗಳು ತಾವು ಬೆಳೆಯುವುದರೊಂದಿಗೆ ಸಮಾಜಕ್ಕೆ ಪೂರಕವಾಗಿರಬೇಕು ಎಂದರು.

Also Read  ಡಿಪ್ಲೊಮಾ ಕೋರ್ಸ್ ಗಳಿಗೆ ಆಫ್ ಲೈನ್ ನಲ್ಲಿ ಅರ್ಜಿ ಆಹ್ವಾನ

ಕಡಬ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು ಮಾತನಾಡಿ ಉತ್ತಮ ಗುಣಮಟ್ಟ ಹಾಗೂ ನಲ್ಮೆಯ ಸೇವೆಯಿಂದ ಜನರ ವಿಶ್ವಾಸ ಗಳಿಸಬೇಕು ಎಂದರು. ಮಂಗಳೂರು ಡಿವಿಜನಲ್ ಮ್ಯಾನೇಜರ್ ಪ್ರಶಾಂತ್ ಕುಂದಾಪುರ ಮಾತನಾಡಿ 139 ವರ್ಷ ಇತಿಹಾಸ ಇರುವ ನಿಪ್ಪೊನ್ ಪೈಂಟ್ ಸಂಸ್ಥೆ ಜಗತ್ತಿನಲ್ಲಿ ಅತಿ ದೊಡ್ಡ ಪೈಂಟ್ ವ್ಯವಹಾರ ನಡೆಸುವ ಸಂಸ್ಥೆಯಾಗಿದೆ. ರಾಸಾಯನಿಕ ರಹಿತ ಪೈಂಟ್ ಒದಗಿಸುವ ಭಾರತದ ಪ್ರಥಮ ಕಂಪನಿಯಾಗಿದೆ, ಹುಸೇನ್ ನೆಲ್ಯಾಡಿ ಅವರು ಕಡಬದ ಪ್ರಥಮ ವಿತರಕರಾಗಿದ್ದಾರೆ ಎಂದರು. ಕಡಬ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷ ಎಸ್.ಅಬ್ದುಲ್ ಖಾದರ್, ಮಂಗಳೂರಿನ ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಎಸ್.ಡಿ.ಪಿ.ಐ ಜಿಲ್ಲಾ ಸಮಿತಿಯ ಸದಸ್ಯ ಆನಂದ ಮಿತ್ತಬೈಲ್, ನಿಪ್ಪೋನ್ ಪೈಂಟ್ನ ಸೀನಿಯರ್ ರಿಟೈಲ್ ಆಫಿಸರ್ ಕೆ.ಎಸ್.ಗುಣಪಾಲ ಆಳ್ವ ಮತ್ತಿತರರು ಅತಿಥಿಗಳಾಗಿ ಶುಭ ಹಾರೈಸಿದರು.

Also Read  ಕಂಬಳದಲ್ಲಿ ಶ್ರೀನಿವಾಸ ಗೌಡರ ದಾಖಲೆ ಮುರಿದ ಬೈಂದೂರಿನ ವಿಶ್ವನಾಥ್..! ➤ 9.15 ಸೆಕೆಂಡ್ ಗಳಲ್ಲಿ 100 ಮೀಟರ್ ಓಡಿ ದಾಖಲೆ ನಿರ್ಮಾಣ

ವೇದಿಕೆಯಲ್ಲಿ ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ, ಸದಸ್ಯರಾದ ಕೆ.ಎಂ.ಹನೀಫ್, ಆದಂ ಕುಂಡೋಳಿ, ಎ.ಎಸ್.ಶರೀಫ್, ಮಧುರಾ ಕಾಂಪ್ಲೆಕ್ಸ್‍ನ ಮಾಲಕ ಚಿದಾನಂದ ಗೌಡ, ನಿಪ್ಪೋನ್ ಸಂಸ್ಥೆಯ ಪ್ರತಿನಿಧಿ ಕಿಶೋರ್ ಕುಮಾರ್, ಸಂಸ್ಥೆಯ ಮಾಲಕ ಹಸೇನ್ ನೆಲ್ಯಾಡಿ, ಎಂ.ಎಚ್ ಟ್ರೇಡರ್ಸ್ ಮಾಲಕ ಹುಸೇನ್ ನೆಲ್ಯಾಡಿ, ಪಾಲುದಾರರಾದ ಅಬ್ದುಲ್ ರಶೀದ್ ನೆಲ್ಯಾಡಿ, ರಾಝಿಕ್ ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು. ಕಡಬ ಪೇಪರ್ ಏಜೆಂಟ್ ಎನ್.ಅಬ್ಬಾಸ್ ಅತಿಥಿಗಳನ್ನು ಬರಮಾಡಿಕೊಂಡರು. ಕಡಬ ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್ ಶೇಡಿಗುಂಡಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದ ಬಳಿಕ ಸಸಿ ನೆಡುವ ಮೂಲಕ ಪರಿಸರ ಸ್ನೇಹಿ ದಿನವನ್ನಾಗಿ ಆಚರಿಸಲಾಯಿತು.

error: Content is protected !!
Scroll to Top