(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19. ಅತ್ಯುತ್ತಮ ಭಾಷಣಕಾರ್ತಿಯಾಗಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವಿಶೇಷ ವಿಚಾರ ಸಂಕಿರಣಗಳ ಮೂಲಕ ಪ್ರಖ್ಯಾತರಾದ ರೋಹಿಣಿ ಮುಂಡ್ರಾ ತನ್ನ ಮೊದಲ ಪುಸ್ತಕ “ದಿ 1% ಕ್ಲಬ್” ಅನ್ನು ಬೆಂಗಳೂರಿನ ಹೋಟೆಲ್ ರಾಯಲ್ ಆರ್ಕಿಡ್ಸ್ ನಲ್ಲಿ ಬಿಡುಗಡೆ ಮಾಡಿದರು.
ಈ ಮೂಲಕ ಉದಯೋನ್ಮುಖ ಲೇಖಕಿಯಾಗಿ ಹೊರಹೊಮ್ಮಿದ್ದು, ಇದು ಇವರ ಸಾಧನೆಯ ಮತ್ತೊಂದು ಗರಿಯಾಗಿ ಸೇರ್ಪಡೆಯಾಗಿದೆ. ರೋಹಿಣಿ ಮುಂದ್ರರವರ ಪುಸ್ತಕವನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಅಕ್ಕೈ ಪದ್ಮಶಾಲಿ ಅನಾವರಣಗೊಳಿಸಿದರು. ಸಮಾರಂಭದಲ್ಲಿ ಭಾರತೀಯ ಅಂತರರಾಷ್ಟ್ರೀಯ ಕ್ರಿಕೆಟಿಗ ಕರುಣಾ ವಿಜಯಕುಮಾರ್ ಜೈನ್, ಕೆಪಿಸಿಸಿಯ ಅತ್ಯುತ್ತಮ ಶಿಕ್ಷಣ ತಜ್ಞ ಮತ್ತು ಪ್ರಧಾನ ಕಾರ್ಯದರ್ಶಿ ಅಗಾ ಸುಲ್ತಾನ್ ಉಪಸ್ಥಿತರಿದ್ದರು.
ಸಮಾಜದ ದೀನ ದಲಿತರಿಗಾಗಿ ಕೆಲಸ ಮಾಡುವ ಉದ್ದೇಶದಿಂದ ರೋಹಿಣಿಯವರು ತನ್ನದೇ ಆದ ಆರ್.ಎಂ. ಫೌಂಡೇಶನ್ ಅನ್ನು ಉದ್ಘಾಟಿಸಿದರು. ಅಲ್ಲದೆ ಒಟ್ಟು ಆದಾಯದ 40% ಆರ್‌ಎಂ ಫೌಂಡೇಶನ್‌ಗೆ ದೇಣಿಗೆ ನೀಡುವುದಾಗಿ ಅವರು ಘೋಷಿಸಿದರು.