ಸುಬ್ರಹ್ಮಣ್ಯ: ಚಾರಣಕ್ಕೆಂದು ಕುಮಾರ ಪರ್ವತಕ್ಕೆ ತೆರಳಿ ನಾಪತ್ತೆಯಾಗಿದ್ದ ಯುವಕ ಪತ್ತೆ ➤ ಯುವಕನ ಜೀವ ಉಳಿಸಿದ ನೀರಿನ ಪೈಪ್ ➤ ಮೂರು ದಿನಗಳ ಕಾಲ ದಟ್ಟಡವಿಯಲ್ಲಿ ಕಳೆದ ಯುವಕನ ಯಶೊಗಾಥೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.17. ಇಲ್ಲಿನ ಕುಮಾರ ಪರ್ವತಕ್ಕೆ ತನ್ನ ಸ್ನೇಹಿತರೊಂದಿಗೆ ಚಾರಣಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಯುವಕ ಮಂಗಳವಾರದಂದು ಸುಬ್ರಹ್ಮಣ್ಯಕ್ಕೆ ತಲುಪಿದ್ದು, ಆತಂಕಕ್ಕೆ ಒಳಗಾಗಿದ್ದ ಆತನ ಕುಟುಂಬಿಕರು ಹಾಗೂ ಸ್ನೇಹಿತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಬೆಂಗಳೂರಿನ ಗಾಯತ್ರಿ ನಗರ ನಿವಾಸಿ ಸಂತೋಷ್ ತನ್ನ 12 ಮಂದಿ ಗೆಳೆಯರೊಂದಿಗೆ ಶನಿವಾರದಂದು ಪರ್ವತ ಚಾರಣದ ನಿಮಿತ್ತ ಸುಬ್ರಹ್ಮಣ್ಯಕ್ಕೆ ಬಂದಿದ್ದು ಅರಣ್ಯ ಇಲಾಖೆಯವರ ಅನುಮತಿ ಪಡೆದು ಮಧ್ಯಾಹ್ನ 11:00 ಗಂಟೆಗೆ ಶೇಷಪರ್ವತ ಎಂಬಲ್ಲಿಗೆ ತಲುಪಿ ಹಿಂತಿರುಗುತ್ತಿರುವಾಗ ಕಾಣೆಯಾಗಿದ್ದರು. ಜೊತೆಗಾರರು ಸಂತೋಷ್ ನನ್ನು ಹುಡುಕಿದರಾದರೂ ಪತ್ತೆಯಾಗದೆ ಇದ್ದುದರಿಂದ ಸೋಮವಾರದಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Also Read  ಕಾರ್ಯಸಿದ್ದಿ ಜ್ಯೋತಿಷ್ಯಂ - ದಿನ ಭವಿಷ್ಯ

ಅದರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯ ಪೊಲೀಸರು ಸಂತೋಷ್ ನ ಪತ್ತೆಗಾಗಿ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳನ್ನು ಒಳಗೊಂಡ 05 ತಂಡಗಳನ್ನು ರಚಿಸಿ ಮಂಗಳವಾರದಂದು ಬೆಳಿಗ್ಗಿನಿಂದ ಕಾರ್ಯಾಚರಣೆ ಪ್ರಾರಂಭಿಸಿದ್ದರು.

ಆದರೆ ನಾಪತ್ತೆಯಾಗಿದ್ದ ಬಳಿಕ ಕಾಡಿನಲ್ಲಿ ಮರೆಯಾದ ಸಂತೋಷ್ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಡಿನಿಂದ ನೀರು ಸರಬರಾಜಿಗೆಂದು ಅಳವಡಿಸಿದ್ದ ಪೈಪುಗಳ ಮೂಲಕವೇ ಸಾಗಿ ಬಂದು ಸುಬ್ರಹ್ಮಣ್ಯಕ್ಕೆ ತಲುಪಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top