ಸುಬ್ರಹ್ಮಣ್ಯ: ಚಾರಣಕ್ಕೆಂದು ಕುಮಾರ ಪರ್ವತಕ್ಕೆ ತೆರಳಿದ ಯುವಕ ನಾಪತ್ತೆ ➤ ಹುಡುಕಾಟಕ್ಕೆಂದು 5 ತಂಡಗಳ ರಚನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.16. ಇಲ್ಲಿನ ಕುಮಾರ ಪರ್ವತಕ್ಕೆ ಚಾರಣಕ್ಕೆಂದು ತೆರಳಿದ್ದ ಯುವಕನೋರ್ವ ನಾಪತ್ತೆಯಾದ ಘಟನೆ ಶನಿವಾರದಂದು ನಡೆದಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಯುವಕನನ್ನು ಬೆಂಗಳೂರಿನ ಗಾಯತ್ರಿ ನಗರ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ಸಂತೋಷ್ ತನ್ನ 12 ಮಂದಿ ಗೆಳೆಯರೊಂದಿಗೆ ಪರ್ವತ ಚಾರಣದ ನಿಮಿತ್ತ ಶನಿವಾರದಂದು ಬೆಳಿಗ್ಗೆ 7:00 ಗಂಟೆಗೆ ಸುಬ್ರಹ್ಮಣ್ಯಕ್ಕೆ ಬಂದಿದ್ದು ಅರಣ್ಯ ಇಲಾಖೆಯವರ ಅನುಮತಿ ಪಡೆದು ಮಧ್ಯಾಹ್ನ 11:00 ಗಂಟೆಗೆ ಶೇಷಪರ್ವತ ಎಂಬಲ್ಲಿಗೆ ತಲುಪಿ ಹಿಂತಿರುಗುತ್ತಿರುವಾಗ ಕಾಣೆಯಾಗಿದ್ದಾರೆ. ಜೊತೆಗಾರರು ಸಂತೋಷ್ ನನ್ನು ಹುಡುಕಿದರಾದರೂ ಪತ್ತೆಯಾಗದೆ ಇದ್ದುದರಿಂದ ಸೋಮವಾರದಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read  ಮಂಗಳೂರು: ಹಾಸ್ಟೆಲ್ ಕಿಟಕಿ ಮುರಿದು ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಪತ್ತೆ

ಸಂತೋಷ್ ನ ಪತ್ತೆಗಾಗಿ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳನ್ನು ಒಳಗೊಂಡ 05 ತಂಡಗಳನ್ನು ರಚಿಸಲಾಗಿದ್ದು, ಮಂಗಳವಾರದಂದು ಬೆಳಿಗ್ಗೆ 06.00 ಗಂಟೆಗೆ ಕಾರ್ಯಚರಣೆ ಪ್ರಾರಂಭಿಸಲಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

error: Content is protected !!
Scroll to Top