ಜೇಸಿಐ ಕಡಬ ಕದಂಬ ಘಟಕದ ಜೇಸಿ ಸಪ್ತಾಹ ‘ಕದಂಬೋತ್ಸವ’ದ ಸಮಾರೋಪ ➤ ಇಂದು ಸಂಜೆ ಕಡಬದಲ್ಲಿ ‘ಡ್ಯಾನ್ಸ್ ಬ್ಲಾಸ್ಟ್’ ಅದ್ಭುತ ನೃತ್ಯ ಪ್ರದರ್ಶನ

(ನ್ಯೂಸ್ ಕಡಬ) newskadaba.com ಕಡಬ, ಸೆ.15. ಜೇಸಿಐ ಕಡಬ ಕದಂಬ ಹಾಗೂ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಕಳೆದ ಒಂದು ವಾರಗಳಿಂದ ನಡೆಯುತ್ತಿರುವ ಜೇಸಿ ಸಪ್ತಾಹ ‘ಕದಂಬೋತ್ಸವ’ ದ ಸಮಾರೋಪ ಸಮಾರಂಭವು ಇಂದು ಕಡಬದಲ್ಲಿ ನಡೆಯಲಿದೆ.

ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಸಭಾ ಭವನದಲ್ಲಿ ಭಾನುವಾರ ಸಂಜೆ 6.00 ರಿಂದ ಸಪ್ತಾಹದ ಸಭಾ ಕಾರ್ಯಕ್ರಮ ನಡೆಯಲಿದ್ದು, ಆ ಬಳಿಕ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಈ ಟಿವಿ ಹಾಗೂ ಝೀ ಕನ್ನಡ ವಾಹಿನಿಗಳಲ್ಲಿ ಪ್ರದರ್ಶನ ನೀಡಿರುವ ನೃತ್ಯಪಟುಗಳಿಂದ ‘ಡ್ಯಾನ್ಸ್ ಬ್ಲಾಸ್ಟ್’ ಅದ್ಭುತ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಶಂಕು ಹುಳುಗಳು - ನಿರ್ವಹಣೆ ಕ್ರಮ

error: Content is protected !!
Scroll to Top