ಮಾಣಿ: ಹೆದ್ದಾರಿ ಮಧ್ಯದ ಬೃಹತ್ ಹೊಂಡದಲ್ಲಿ ಸಿಲುಕಿದ ಖಾಸಗಿ ಬಸ್ ➤ ಉಪ್ಪಿನಂಗಡಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರದಲ್ಲಿ ಅಡಚಣೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.14. ರಸ್ತೆಯ ಮಧ್ಯದಲ್ಲಿರುವ ಹೊಂಡವೊಂದರಲ್ಲಿ ಬಸ್ಸೊಂದು ಸಿಲುಕಿ ಹಾಕಿಕೊಂಡ ಪರಿಣಾಮ ಎರಡು ತಾಸು ರಸ್ತೆ ಸಂಚಾರಕ್ಕೆ ತಡೆಯುಂಟಾದ ಘಟನೆ ಶನಿವಾರ ಬೆಳಿಗ್ಗೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಲ್ಲಿ ಸಂಭವಿಸಿದೆ‌.

ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ದುರ್ಗಾಂಬಾ ಸಂಸ್ಥೆಗೆ ಸೇರಿದ ವೋಲ್ವೋ ಬಸ್ ಮಾಣಿ ಸಮೀಪದ ಬೊಳ್ಳುಕಳ್ಳು ಎಂಬಲ್ಲಿ ಹೆದ್ದಾರಿಯ ಮಧ್ಯದ ಬೃಹತ್ ಹೊಂಡಕ್ಕೆ ಸಿಲುಕಿದೆ. ಬಳಿಕ ಉಪ್ಪಿನಂಗಡಿಯಿಂದ ಕ್ರೇನ್ ತರಿಸಿ ಬಸ್ಸನ್ನು ಬದಿಗೆ ಸರಿಸಲಾಯಿತು. ಬಸ್ಸು ಹಿಂದಕ್ಕೂ ಬರಲಾಗದೆ, ಮುಂದಕ್ಕೂ ಚಲಿಸಲಾಗದೆ ಸಿಲುಕಿಕೊಂಡ ಪರಿಣಾಮ ಸುಮಾರು ಎರಡು ತಾಸುಗಳ ಕಾಲ ಘನ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.

Also Read  ಕಡಬ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಕ್ರಮ ದನ ಸಾಗಾಟ ಮಾಡುತ್ತಿದ್ದ ಕಾರು ಢಿಕ್ಕಿ - ಹಿಂದೂ ಪರ ಸಂಘಟನೆಗಳಿಂದ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ

error: Content is protected !!
Scroll to Top